Appam, Appam - Kannada

ಮೇ 31 – ಯಾವ ಅಡತಡೆಗಳು ಇರುವುದಿಲ್ಲ!

“ತಾರ್ಷೀಷ್‌ನಗರಿಯೇ, ನೈಲ್‌ನದಿಯಂತೆ ನಿನ್ನ ದೇಶವನ್ನು ಆವರಿಸು; ನಡುಕಟ್ಟು ಸಡಲಿತು, ಇನ್ನಿಲ್ಲ,” (ಯೆಶಾ 23:10)

ಪ್ರವಾದಿಯಾದ ಯೆಶಾಯನು ಅನೇಕ ಜನಾಂಗಗಳ ಮೇಲೆ ನ್ಯಾಯತೀರ್ಪುಗಳನ್ನು ಪ್ರವಾದಿಸಿದ ನಂತರ, ಕೊನೆಯದಾಗಿ ತಾರ್ಷೀಷ್‌ನಗರಕ್ಕೆ, “ನದಿಯಂತೆ ನಿನ್ನ ದೇಶದಲ್ಲಿ ಹರಿದು ಹೋಗು; ನಿನಗೆ ಇನ್ನು ಯಾವುದೇ ತಡೆ ಇಲ್ಲ” ಎಂದು ಹೇಳಿದನು.

ನಾವು ಕೂಡ ಕರ್ತನ ನದಿಗಳಂತಿದ್ದೇವೆ—ದೇವರ ಮತ್ತು ಕುರಿಮರಿಯಾದಾತನ ಸಿಂಹಾಸನದಿಂದ ಹರಿಯುವ ನದಿಗಳು. ನಮ್ಮ ಒಳಗಿನಿಂದ ಜೀವಜಲದ ನದಿಗಳು ಹರಿಯುತ್ತವೆ. ನದಿಗಳು ಒಂದು ದೇಶಕ್ಕೆ ದೊಡ್ಡ ಆಶೀರ್ವಾದವಾಗಿವೆ.

ಕೆಲವೊಮ್ಮೆ, ಜನರು ನದಿಯು ಮುಕ್ತವಾಗಿ ಹರಿಯುವುದನ್ನು ತಡೆಯಲು ಅಣೆಕಟ್ಟುಗಳನ್ನು ಕಟ್ಟಿ, ನೀರನ್ನು ಸಂಗ್ರಹಿಸಿಡುತ್ತಾರೆ. ಆದರೆ ನಾವು ಒಂದೇ ಕಡೆ ನಿಂತ ನೀರಿನಂತೆ ತಟಸ್ತವಾಗಿರಲು ಬಯಸುವದಿಲ್ಲ. ನಾವು ಸದಾಕಾಲವೂ ಹರಿಯಬೇಕೆಂದು ಆತನು ಬಯಸುತ್ತಾನೆ. ಆತನು ಪ್ರತಿಯೊಂದು ಅಡೆತಡೆಯನ್ನು ಮುರಿದು ಪ್ರೀತಿಯಿಂದ, “ಮುಕ್ತವಾಗಿ ಹರಿ—ನಿನಗೆ ಇನ್ನು ಯಾವುದೇ ಅಣೆಕಟ್ಟು ಇಲ್ಲ!” ಎಂದು ಘೋಷಿಸುತ್ತಾನೆ.

ಒಂದು ಕುಟುಂಬದಲ್ಲಿ, ಒಬ್ಬ ಸಹೋದರಿ ಕರ್ತನಿಂದ ಗುಣಪಡಿಸುವ ಮತ್ತು ಪ್ರವಾದಿಸುವ ವರಗಳನ್ನು ಹೊಂದಿದ್ದಳು. ಅವಳು ಪ್ರಾರ್ಥನಾಪರಳಾಗಿದ್ದಳು ಮತ್ತು ಎದ್ದು ಪ್ರಕಾಶಿಸಬೇಕೆಂಬ ಬಲವಾದ ಬಯಕೆಯನ್ನು ಹೊಂದಿದ್ದಳು. ಆದರೆ, ಅವಳ ಅತ್ತೆಯು ಅವಳನ್ನು ಸೇವೆಗೆ ಹೋಗಲು ಬಿಡುತ್ತಿರಲಿಲ್ಲ, ಸದಾ ದೂರುತ್ತಾ ಅವಳಿಗೆ ಅಡ್ಡಿಪಡಿಸುತ್ತಿದ್ದಳು.

ಒಂದು ದಿನ ಕರ್ತನು ಮಧ್ಯಪ್ರವೇಶಿಸಿದರು. ಆತನು ಆ ಅಡೆತಡೆಯನ್ನು ತೆಗೆದುಹಾಕಿ ಅವಳನ್ನು ಸೇವೆಗೆ ನಡೆಸಲು ಬಯಸಿದರು. ಕರ್ತನು ಆ ಅತ್ತೆಯ ಹೃದಯದಲ್ಲಿ ತನ್ನ ಕಲ್ವಾರಿ ಪ್ರೀತಿಯನ್ನು ಸುರಿದು, ಆತ್ಮಗಳಿಗಾಗಿ ಪ್ರಾರ್ಥಿಸುವ ಭಾರವನ್ನು ಕೊಟ್ಟರು. ಅತಿ ಕಡಿಮೆ ಅವಧಿಯಲ್ಲಿ, ಅತ್ತೆ ಮತ್ತು ಸೊಸೆ ಇಬ್ಬರೂ ಒಟ್ಟಿಗೆ ಸೇವೆ ಮಾಡಲು ಪ್ರಾರಂಭಿಸಿದರು. ಅದು ಎರಡರಷ್ಟು ಆಶೀರ್ವಾದವಾಯಿತು—ಹಿರಿಯರ ಜ್ಞಾನ ಮತ್ತು ಕಿರಿಯರ ಆತ್ಮಿಕ ವರಗಳು ಸೇವೆಯಲ್ಲಿ ಶಕ್ತಿಯುತವಾಗಿ ಕೆಲಸ ಮಾಡಿದವು.

ಇಂದು ನಿಮ್ಮ ಜೀವನದಲ್ಲಿ ಅಣೆಕಟ್ಟುಗಳಂತಹ ಅಡೆತಡೆಗಳು ಇವೆಯೇ? ನೀವು ಎದ್ದು ಪ್ರಕಾಶಿಸಬೇಕಾದ ರೀತಿಯಲ್ಲಿ ಪ್ರಕಾಶಿಸಲು ಸಾಧ್ಯವಾಗುತ್ತಿಲ್ಲವೇ? ಕರ್ತನು ಅಂತಹ ಪ್ರತಿಯೊಂದು ಅಡ್ಡಿಯನ್ನೂ ತೆಗೆದುಹಾಕಲು ಬಯಸುತ್ತಾರೆ. ಸತ್ಯವೇದವು ಹೇಳುತ್ತದೆ: “ಒಡೆಯುವವನು ಅವರ ಮುಂದೆ ಹೊರಟಿದ್ದಾನೆ; ಅವರೂ ಬಾಗಿಲನ್ನು ಒಡೆದು ನುಗ್ಗಿ ಹೊರಟಿದ್ದಾರೆ; ಅವರ ಅರಸನು ಅವರ ಮುಂದೆ ತೆರಳಿದ್ದಾನೆ.” (ಮೀಕ 2:13)

ಒಂದು ಕಡೆ, ಕರ್ತನು ಅಡೆತಡೆಗಳನ್ನು ಮುರಿಯುವವರಾಗಿದ್ದಾರೆ. ಇನ್ನೊಂದು ಕಡೆ, ಆತನು ಅಂಕುಡೊಂಕಾದ ಸ್ಥಳಗಳನ್ನು ನೆಟ್ಟಗೆ ಮಾಡುತ್ತಾರೆ. ಆತನು ಅರಣ್ಯದಲ್ಲಿ ದಾರಿಯನ್ನೂ, ಮರುಭೂಮಿಯಲ್ಲಿ ನದಿಗಳನ್ನೂ ಉಂಟುಮಾಡುತ್ತಾರೆ.

ಪ್ರಿಯ ದೇವರ ಮಕ್ಕಳೇ, ನಿಮ್ಮ ಜೀವನದಲ್ಲಿ ಏನಾದರೂ ನಿರ್ಬಂಧ ಅಥವಾ ತಡೆ ಉಂಟಾಗಿದೆಯೇ? ಇಂದು ಕರ್ತನು ನಿಮಗಾಗಿ ಪರಾಕ್ರಮಶಾಲಿಯಾಗಿ ಎದ್ದು ನಿಲ್ಲುತ್ತಾರೆ. ಆತನು ನಿಮ್ಮ ಆತ್ಮಿಕ ಜೀವನದಲ್ಲಿ ಬಿಡುಗಡೆಯನ್ನು, ನಿಮ್ಮ ಸೇವೆಯಲ್ಲಿ ಪುನರುಜ್ಜೀವನವನ್ನು ಮತ್ತು ಹೆಚ್ಚಿನ ಆತ್ಮಗಳ ಸುಗ್ಗಿಯನ್ನು ದಯಪಾಲಿಸುವರು.

ಮುಂದಿನ ಅಧ್ಯಾಯಕ್ಕಾಗಿ ದೇವರ ವಾಕ್ಯ: “ನಿನಗೆ ವಿಧಿಸಿದ ದಂಡನೆಗಳನ್ನು ಯೆಹೋವನು ತಪ್ಪಿಸಿದ್ದಾನೆ, ನಿನ್ನ ಶತ್ರುವನ್ನು ತಳ್ಳಿಬಿಟ್ಟಿದ್ದಾನೆ; ಇಸ್ರಾಯೇಲಿನ ಅರಸನಾದ ಯೆಹೋವನು ನಿನ್ನ ಮಧ್ಯದಲ್ಲಿದ್ದಾನೆ.” (ಚೆಫನ್ಯ 3:15)

Leave A Comment

Your Comment
All comments are held for moderation.