Appam, Appam - Kannada

ಮೇ 12 – ಜಯಶಾಲಿಯಾಗುವ ನಿರ್ಧಾರ!

“ಕ್ರಿಸ್ತನ ಅನ್ನೋನ್ಯತೆಯಲ್ಲಿ ನಮ್ಮನ್ನು ಯಾವಾಗಲೂ ಜಯೋತ್ಸವದೊಡನೆ ಮೆರೆಸುತ್ತಾ ಆತನ ವಿಷಯವಾದ ಜ್ಞಾನವೆಂಬ ಸುವಾಸನೆಯನ್ನು ನಮ್ಮ ಮೂಲಕ ಎಲ್ಲಾ ಸ್ಥಳಗಳಲ್ಲ ವ್ಯಾಪನ ಗೊಳಿಸುತ್ತಾ ಬರುವ ದೇವರಿಗೆ ಸ್ತೋತ್ರವು.” (2 ಕೊರಿಂಥ 2:14)

ನೀವು ಜಯದ ಮೇಲೆ ಜಯವನ್ನು ಹೊಂದುತ್ತಾ ಜೀವಿಸಲು ಮತ್ತು ಪ್ರತಿಯೊಂದು ಶೋಧನೆಯನ್ನು ಜಯಿಸಲು ಸಿದ್ಧರಾಗಿ. ವಿಜಯದ ಜೀವನಕ್ಕಾಗಿ ನಿಮ್ಮನ್ನು ನೀವು ಸಮರ್ಪಿಸಿಕೊಳ್ಳಿರಿ. ಇಂದೇ ತೀರ್ಮಾನಿಸಿರಿ. ನೀವು ಯಾವಾಗಲೂ ಜಯಶಾಲಿಯಾಗಿರಬೇಕೆಂಬುದೇ ದೇವರ ಇಚ್ಛೆಯಾಗಿದೆ.

ಈ ನಂಬಿಕೆಯ ಅರಿಕೆಯನ್ನು ಮಾಡಿ: “ನಾನು ಬಾಲವಾಗಿರದೆ ತಲೆಯಾಗಿರುವೆನು; ಕೆಳಗಿವನಾಗದೇ ಮೇಲಿನವನಾಗಿರುವೆನು.” “ದೇವರು ನಮ್ಮ ಕರ್ತನಾದ ಯೇಸು ಕ್ರಿಸ್ತ ಮೂಲಕ ನಮಗೆ ಜಯವನ್ನು ಕೊಟ್ಟಿದ್ದಾನೆ; ಆತನಿಗೆ ಸ್ತೋತ್ರ!” (1 ಕೊರಿಂಥ 15:57)

ಯೇಸು ಕ್ರಿಸ್ತನು ಎಂದಿಗೂ ಸೋಲನ್ನು ಕಂಡವನಲ್ಲ. ಆತನು ಜಯಶಾಲಿಯಾದ ಕರ್ತನು—ಇಸ್ರಾಯೇಲ್ಯರ ಪರಾಕ್ರಮಶಾಲಿ. ಆತನು ಇಸ್ರಾಯೇಲ್ಯರ ಮುಂದೆ ಜಯಶಾಲಿ ರಾಜನಾಗಿ ನಡೆದು, ಜನಾಂಗಗಳನ್ನು ಸೋಲಿಸಿ ರಾಜರ ಮೇಲೆ ವಿಜಯವನ್ನು ನೀಡಿದನು. ಅದೇ ಕರ್ತನು ನಿಮಗೂ ಖಂಡಿತವಾಗಿಯೂ ವಿಜಯವನ್ನು ಅನುಗ್ರಹಿಸುವನು.

ನೀವು ಏನು ಮಾಡಬೇಕು?

  • ಸೋಲಿನ ಯಾವುದೇ ಆಲೋಚನೆಗಳಿಗೆ ಅವಕಾಶ ಕೊಡಬೇಡಿರಿ.
  • ನಕಾರಾತ್ಮಕ ಮಾತುಗಳನ್ನು ಆಡಬೇಡಿರಿ.
  • ನಿರುತ್ಸಾಹವನ್ನು ತಿರಸ್ಕರಿಸಿರಿ.
  • ದೇವರ ಆತ್ಮನಿಂದ ಮತ್ತು ದೃಢವಾದ ಆತ್ಮವಿಶ್ವಾಸದಿಂದ ತುಂಬಿರಿ.

ನಂಬಿಕೆಯಿಂದ ಹೀಗೆ ಘೋಷಿಸಿ: “ಇಂದು ಕರ್ತನು ನನಗಾಗಿ ಒಂದು ಅದ್ಭುತವನ್ನು ಮಾಡುವನು ಮತ್ತು ನನಗೆ ಜಯವನ್ನು ನೀಡುವನು!”

ಅನೇಕ ಜನರು ಸೋಲಿನ ಮಾತುಗಳನ್ನು ಆಡುತ್ತಾರೆ: “ನಾನು ಏಕೆ ಹುಟ್ಟಿದೆ?”, “ಬದುಕುವುದಕ್ಕಿಂತ ಸಾಯುವುದೇ ಲೇಸು”, “ಎಲ್ಲರೂ ಉನ್ನತ ಸ್ಥಾನಕ್ಕೇರುತ್ತಿದ್ದಾರೆ, ಆದರೆ ನಾನು ಮಾತ್ರ ಕೆಳಕ್ಕೆ ಬೀಳುತ್ತಿದ್ದೇನೆ”, “ಇದೆಲ್ಲಾ ನನ್ನ ಹಣೆಬರಹ”. ಇಂತಹ ಮಾತುಗಳು ದೇವರ ಮಗುವಿನ ಬಾಯಿಂದ ಎಂದಿಗೂ ಬರಬಾರದು.

ನೀವು ರಾಜಾಧಿರಾಜನ ಮಕ್ಕಳಾಗಿದ್ದೀರಿ. ಹಾಗಿರುವಾಗ, ನೀವು ಅನಾಥರಂತೆ ಏಕೆ ಬದುಕಬೇಕು? ಕ್ರಿಸ್ತನು ನಿಮಗಾಗಿ ಶಿಲುಬೆಯ ಮೇಲೆ ಎಲ್ಲವನ್ನೂ ಮಾಡಿ ಮುಗಿಸಿದ್ದಾನೆ—ಹಾಗಾದರೆ ನೀವು ದೌರ್ಬಲ್ಯ ಅಥವಾ ಕೊರತೆಯಲ್ಲಿ ಏಕೆ ಜೀವಿಸಬೇಕು? ಎಲ್ಲಾ ವಿಷಯಗಳಲ್ಲಿ ನಿಮ್ಮನ್ನು ಜಯೋತ್ಸವದಲ್ಲಿ ನಡೆಸುವವನು ನಿಮ್ಮೊಂದಿಗಿದ್ದಾನೆ.

ಶತ್ರುಗಳು ಸುತ್ತುವರಿದಿದ್ದ ಯುದ್ಧದ ಸಮಯದಲ್ಲಿ, ಅರಸನಾದ ಯೆಹೋಷಾಫಾಟನು ಜಯದ ಮಾತುಗಳನ್ನು ಆಡಿದನು, ಏಕೆಂದರೆ ಆತನಿಗೆ ದೇವರ ಬಗ್ಗೆ ಸರಿಯಾದ ಜ್ಞಾನವಿತ್ತು: “ಯೆಹೋವನೇ ನಮ್ಮ ಪಿತೃಗಳ ದೇವರಾದ ಯೆಹೋವನೇ, ಪರಲೋಕದಲ್ಲಿ ದೇವರಾಗಿರುವಾತನು ನೀನಲ್ಲವೋ…? ನಿನ್ನ ಹಸ್ತದಲ್ಲಿ ಬಲಪರಾಕ್ರಮಗಳಿರುತ್ತವೆ;, ನಿನ್ನೆದುರಿನಲ್ಲಿ ಯಾರೂ ನಿಲ್ಲಲಾರರು.” (2 ಪೂರ್ವ 20:6)

ಪ್ರಿಯ ದೇವರ ಮಗುವೇ, ನೀವು ಸರ್ವಶಕ್ತ ದೇವರನ್ನು ಹಿಂಬಾಲಿಸುತ್ತಿದ್ದೀರಿ. ಆತನಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ಈ ಲೋಕದಲ್ಲಿ ನೀವು ಸಂಕಷ್ಟಗಳನ್ನು ಎದುರಿಸಬಹುದು—ಆದರೆ ಕುಗ್ಗಬೇಡಿ. ಯುದ್ಧವು ಯೆಹೋವನದು. ಸೋಲು ಸೈತಾನನಿಗೆ ಸೇರಿದ್ದು. ಮತ್ತು ವಿಜಯವು ನಿಮಗೆ ಸೇರಿದ್ದು. ನಿಮಗೆ ಜಯವನ್ನು ನೀಡುವ ದೇವರಿಗೆ ಕೃತಜ್ಞತೆ ಸಲ್ಲಿಸಿ!

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ ನೀನು ಹತ್ತಿರವಿರುವದರಿಂದ ಕೇಡಿಗೆ ಹೆದರೆನು; ನಿನ್ನ ದೊಣ್ಣೆಯೂ ಕೋಲು ನನಗೆ ಧೈರ್ಯಕೊಡುತ್ತದೆ. ” (ಕೀರ್ತ 23:4)

Leave A Comment

Your Comment
All comments are held for moderation.