ಮೇ 13 – ಯೆಹೂದದ ಸಿಂಹ!
“ಅಗೋ, ಯೂದಾ ಕುಲದಲ್ಲಿ ಜನಿಸಿದ ಸಿಂಹವೂ ದಾವೀದನ ಅಂಕುರದವನೂ ಆಗಿರುವಾತನು ಜಯಹೊಂದಿದನು.” (ಪ್ರಕ 5:5)
ಸತ್ಯವೇದದಲ್ಲಿ ಮೂರು ಜನರನ್ನು ಸಿಂಹಕ್ಕೆ ಹೋಲಿಸಲಾಗಿದೆ:
- ಕರ್ತನಾದ ಯೇಸು ಕ್ರಿಸ್ತನು – ಯೆಹೂದ ಕುಲದ ಸಿಂಹ (ಪ್ರಕ 5:5).
- ನೀತಿವಂತರು – ಸಿಂಹದಂತೆ ಧೈರ್ಯಶಾಲಿಗಳು (ಜ್ಞಾನೋ 28:1).
- ಸೈತಾನನು – ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ. (1 ಪೇತ್ರ 5:8).
ಸೈತಾನನನ್ನು ಸಿಂಹಕ್ಕೆ ಹೋಲಿಸಲಾಗಿದ್ದರೂ, ಅವನು ನಿಜವಾದ ಧೈರ್ಯಶಾಲಿಯಲ್ಲ. ದೇವರ ವಾಕ್ಯವು ಹೀಗೆ ಹೇಳುತ್ತದೆ: “ದೇವರಿಗೆ ಒಳಗಾಗಿರಿ. ಸೈತಾನನ್ನು ಎದುರಿಸಿರಿ, ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು.” (ಯಾಕೋ 4:7). ಸೈತಾನನು ಈಗಾಗಲೇ ಸೋಲಿಸಲ್ಪಟ್ಟಿದ್ದಾನೆ. ಕ್ರಿಸ್ತನು ಶಿಲುಬೆಯ ಮೇಲೆ ಅವನ ತಲೆಯನ್ನು ಜಜ್ಜಿದನು ಮತ್ತು ಅವನ ಶಕ್ತಿ ಹಾಗೂ ಅಧಿಕಾರವನ್ನು ಕಸಿದುಕೊಂಡನು. ಆದ್ದರಿಂದ, ನೀತಿವಂತರು ಧೈರ್ಯದಿಂದ ನಿಂತು ಅವನನ್ನು ಜಯಿಸಬಹುದು.
ದೃಢವಾಗಿ ನಿಲ್ಲಿರಿ ಮತ್ತು ಭಯಪಡಬೇಡಿ:
ಶತ್ರುವು ಸಮಸ್ಯೆಗಳನ್ನು ತಂದಾಗ, ಅವನನ್ನು ಎದುರಿಸಿರಿ. ಯುದ್ಧಗಳು ಎದುರಾದಾಗ ಮತ್ತು ವಿರೋಧಗಳು ಹೆಚ್ಚಾದಾಗ ದೃತಿಗೆಡಬೇಡಿ. “ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿ ಹೋದರೆ ನಿನ್ನ ಬಲವೂ ಇಕ್ಕಟ್ಟೇ.” (ಜ್ಞಾನೋ 24:10). ನೀವು ಇಲ್ಲಿಂದ ಅಲ್ಲಿಗೆ ಓಡುವ ಹೆದರಿದ ಇಲಿಯ ಹಾಗೆ ಇರಬಾರದು, ಕಾರಣ, ನೀವು ಸಿಂಹದಂತಿದ್ದೀರಿ.
ಯೆಹೂದದ ಸಿಂಹನಾದ ಆ ಅರಸನು ಸಿಂಹಾಸನದ ಮೇಲೆ ಆಸೀನನಾಗಿದ್ದಾನೆ ಮತ್ತು ನೀವು ಆತನ ಮಕ್ಕಳಾಗಿದ್ದೀರಿ.
ಧೈರ್ಯದ ರಹಸ್ಯ:
ಧೈರ್ಯ ಮತ್ತು ಅತ್ಯಾಸಕ್ತಿಯ ಪ್ರಾರ್ಥನೆಯು ನಿಮ್ಮನ್ನು ಬಲಪಡಿಸುತ್ತದೆ. ಭಯವು ಅತ್ಯಂತ ದೊಡ್ಡ ಕಾಯಿಲೆಗಳಲ್ಲಿ ಒಂದು. ವಿಶೇಷವಾಗಿ ಅನಾರೋಗ್ಯದ ಸಮಯದಲ್ಲಿ ಜನರು ನಕಾರಾತ್ಮಕ ಮತ್ತು ಭಯಾನಕ ಮಾತುಗಳನ್ನು ಆಡಬಹುದು. “ಈ ಕಾಯಿಲೆಯಿಂದ ನೂರರಲ್ಲಿ ಒಬ್ಬರು ಮಾತ್ರ ಬದುಕುತ್ತಾರೆ…” “ಈ ಕಾಯಿಲೆಯಿಂದ ಅನೇಕರು ಮರಣ ಹೊಂದಿದ್ದಾರೆ…” ಎಂಬಂತಹ ಮಾತುಗಳು ವ್ಯಕ್ತಿಯನ್ನು ಕುಗ್ಗಿಸಬಹುದು. ಆದರೆ ನೀತಿವಂತರು ಭಯಕ್ಕೆ ಅಂಜುವವರಲ್ಲ—ಅವರು ಸಿಂಹದಂತೆ ಧೈರ್ಯದಿಂದ ಇರುತ್ತಾರೆ.
ಜನರು ಪೇತ್ರ ಮತ್ತು ಯೋಹಾನರ ಧೈರ್ಯವನ್ನು ಕಂಡಾಗ ಆಶ್ಚರ್ಯಚಕಿತರಾದರು ಮತ್ತು ಒಂದು ವಿಷಯವನ್ನು ಅರ್ಥಮಾಡಿಕೊಂಡರು: ಅವರು ಯೇಸುವಿನೊಂದಿಗೆ ಇದ್ದವರು (ಅಪೋ 4:13). ಅದೇ ಅವರ ಧೈರ್ಯದ ರಹಸ್ಯವಾಗಿತ್ತು.
ಒಂದು ಸಿಂಹದ ಮರಿ ಕೂಡ ದೊಡ್ಡ ಸಿಂಹದ ಜೊತೆಗಿದ್ದಾಗ ಧೈರ್ಯಶಾಲಿಯಾಗುತ್ತದೆ. ಹಾಗೆಯೇ, ನೀವು ಎಷ್ಟು ಹೆಚ್ಚಾಗಿ ದೇವರ ಸನ್ನಿಧಿಯಲ್ಲಿ ಇರುತ್ತೀರೋ ಮತ್ತು ಪವಿತ್ರಾತ್ಮನಿಂದ ತುಂಬಲ್ಪಡುತ್ತೀರೋ, ಅಷ್ಟು ಹೆಚ್ಚಿನ ಧೈರ್ಯ ಮತ್ತು ಶಕ್ತಿ ನಿಮ್ಮಲ್ಲಿ ಬೆಳೆಯುತ್ತದೆ.
ಪೇತ್ರ ಮತ್ತು ಯೋಹಾನರು ದೊಡ್ಡ ವಿದ್ವಾಂಸರಲ್ಲದಿದ್ದರೂ, ಅಧಿಕಾರಿಗಳ ಮುಂದೆ ಧೈರ್ಯದಿಂದ ಸುವಾರ್ತೆಯನ್ನು ಸಾರಿದರು ಮತ್ತು ದೊಡ್ಡ ಭಕ್ತಿ ಸಂಜೀವನವನ್ನು ತಂದರು.
ಪ್ರಿಯ ದೇವರ ಮಕ್ಕಳೇ, ಧೈರ್ಯವಾಗಿಯೂ ಶಕ್ತಿಯುತವಾಗಿ ಜೀವಿಸಿರಿ. ಕರ್ತನು ನಿಮ್ಮೊಂದಿಗಿದ್ದಾನೆ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ನಾನು ಮೊರೆಯಿಟ್ಟಾಗ ಸದುತ್ತರವನ್ನು ದಯಪಾಲಿಸಿದಿ; ನನ್ನ ಆತ್ಮಕ್ಕೆ ಬಲಕೊಟ್ಟು ನನ್ನನ್ನು ಧೈರ್ಯಪಡಿಸಿದ್ದೀ.” (ಕೀರ್ತ 138:3)