Appam, Appam - Kannada

ನವೆಂಬರ್ 21 – ನೋಡುವ ಕರ್ತನು!

“ಯೆಹೋವನ ದೃಷ್ಟಿಯು ಎಲ್ಲೆಲ್ಲಿಯೂ ಇರುವದು; ಆತನು ಕೆಟ್ಟವರನ್ನೂ ಒಳ್ಳೆಯವನ್ನೂ ನೋಡುತ್ತಲೇ ಇರುವನು.” ಜ್ಞಾನೋ 15:3

ಒಮ್ಮೆ ಹೆಚ್ಚು ಕೀರ್ತಿಯನ್ನು ಪಡೆದು ಮಹಿಮೆಯಿಂದಲೂ ಆಳ್ವಿಕೆ ಮಾಡಿದ ಚೀನಾ ದೇಶದ ಚಕ್ರವರ್ತಿಯಾದ ಶಿ ಹುವಾಂಗ್ ಎಂಬಾತನಿಗೆ ಎಂಬತ್ತು ಸಾವಿರ ಕಣ್ಣುಗಳು ಇದ್ದವು ಎಂದು ಹೇಳಲಾಗುತ್ತದೆ. ಅವನಿಗೆ ಈ ಹೆಸರು ಬರಲು ಕಾರಣವೇನು ಗೊತ್ತೇ? ಅವನು ತನ್ನ ದೇಶದ ಸುತ್ತಲೂ ಒಂದು ಮಹಾ ಗೋಡೆಯನ್ನು ನಿರ್ಮಿಸಿ, ಅದರ ಮೇಲೆ ನಲವತ್ತು ಸಾವಿರ ಕಾವಲು ಗೋಪುರಗಳನ್ನು ಕಟ್ಟಿಸಿದನು. ದೇಶದ ಮೇಲೆ ನಿರಂತರ ಕಾವಲು ಕಾಯಲು ಮತ್ತು ಅದನ್ನು ರಕ್ಷಿಸಲು, ಹಗಲಿನಲ್ಲಿ ನಲವತ್ತು ಸಾವಿರ ಸೈನಿಕರನ್ನೂ, ರಾತ್ರಿಯಲ್ಲಿ ಮತ್ತೊಂದು ನಲವತ್ತು ಸಾವಿರ ಸೈನಿಕರನ್ನೂ ನಿಯೋಜಿಸಿದನು.

ಹೀಗಾಗಿ, ಹಗಲಿನಲ್ಲಿ ಎಂಬತ್ತು ಸಾವಿರ ಕಣ್ಣುಗಳು ದೇಶವನ್ನು ಕಾಯುತ್ತಿದ್ದವು, ಮತ್ತು ರಾತ್ರಿಯಲ್ಲಿ ಮತ್ತೊಂದು ಎಂಬತ್ತು ಸಾವಿರ ಕಣ್ಣುಗಳು ಕಾವಲು ಕಾಯುತ್ತಿದ್ದವು. ಅಂತಹ ಎಚ್ಚರಿಕೆಯಿಂದಲೂ ಜಾಗರೂಕತೆಯಿಂದಲೂ ತಮ್ಮನ್ನು ಆಳಿದ ಮತ್ತು ರಕ್ಷಿಸಿದ ಚಕ್ರವರ್ತಿಯನ್ನು ಜನರು ಬಹಳವಾಗಿ ಮೆಚ್ಚಿಕೊಂಡರು.

ಸೊಲೊಮೋನನು ತಾನು ಕಟ್ಟಿಸಿದ ದೇವಾಲಯವನ್ನು ಸಮರ್ಪಿಸಿದಾಗ, ಹಗಲು ರಾತ್ರಿ ಎನ್ನದೆ ಆ ದೇವಾಲಯದ ಮೇಲೆ ತನ್ನ ಕಣ್ಣುಗಳು ತೆರೆದಿರುವಂತೆ ಕರ್ತನನ್ನು ಪ್ರಾರ್ಥಿಸಿ ಬೇಡಿಕೊಂಡನು (1 ಅರಸು 8:28–29).

ತನ್ನ ಸೇವಕನ ಮತ್ತು ತನ್ನ ಜನರಾದ ಇಸ್ರಾಯೇಲ್ಯರ ಪ್ರಾರ್ಥನೆಗಳಿಗೆ ಕರ್ತನ ಕಣ್ಣುಗಳು ಯಾವಾಗಲೂ ತೆರೆದಿರುವಂತೆ ಅವನು ಬೇಡಿಕೊಂಡನು (1 ಅರಸು 8:52).

ಕರ್ತನಿಗೆ ಎಂತಹ ಕಣ್ಣುಗಳಿವೆ? ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ.” (2 ಪೂರ್ವ 16:9).

ದೇವರಿಗೆ ಏಳು ಕಣ್ಣುಗಳಿವೆ ಎಂದು ನಾವು ಸತ್ಯವೇದದಲ್ಲಿ ಓದುತ್ತೇವೆ. ಇದರ ಅರ್ಥವೇನು? ಆತನು ಎಲ್ಲವನ್ನೂ ಪರಿಪೂರ್ಣವಾಗಿ ನೋಡುತ್ತಾನೆ. ಆತನ ದೃಷ್ಟಿಯೂ ಗಮನವೂ ಎಲ್ಲ ರೀತಿಯಿಂದಲೂ ಪರಿಪೂರ್ಣವಾಗಿವೆ. ಈ ಏಳು ಕಣ್ಣುಗಳು ಇಡೀ ಭೂಮಿಯ ಮೇಲೆ ಕಳುಹಿಸಲ್ಪಟ್ಟ ದೇವರ ಏಳು ಆತ್ಮಗಳನ್ನು ಪ್ರತಿನಿಧಿಸುತ್ತವೆ.

ಒಂದು ಕುರಿ ಕೊಯ್ಯಲ್ಪಟ್ಟದ್ದಾಗಿ ನಿಂತಿರುವದನ್ನು ಕಂಡೆನು. ಅದಕ್ಕೆ ಏಳು ಕೊಂಬುಗಳು ಏಳು ಕಣ್ಣುಗಳೂ ಇದ್ದವು; ಅವು ಏನಂದರೆ ಭೂಮಿಯ ಮೇಲೆಲ್ಲಾ ಕಳುಹಿಸಲ್ಪಟ್ಟಿರುವ ಏಳು ಆತ್ಮಗಳು (ಪ್ರಕ 5:6).

ನಮ್ಮ ಪ್ರೀತಿಯ ಕರ್ತನು ಅತ್ಯಂತ ಜಾಗರೂಕತೆಯಿಂದ ನಮ್ಮನ್ನು ಕಾಯುತ್ತಾನೆ. ಆತನು ನಿನ್ನ ಪಾದಗಳನ್ನು ಕದಲಗೊಡಿಸದಿರಲಿ; ನಿನ್ನನ್ನು ಕಾಯುವವನು ತೂಕಡಿಸದಿರಲಿ. ಇಗೋ, ಇಸ್ರಾಯೇಲ್ಯರನ್ನು ಕಾಯುವಾತನು ತೂಕಡಿಸುವುದಿಲ್ಲ, ನಿದ್ರಿಸುವದಿಲ್ಲ ಎಂದು ಸತ್ಯವೇದವು ನಮಗೆ ಧೈರ್ಯ ನೀಡುತ್ತದೆ. ಇಸ್ರಾಯೇಲ್ಯರನ್ನು ಕಾಯುವವನು ಎಂದಿಗೂ ನಿದ್ರಿಸುವುದಿಲ್ಲ (ಕೀರ್ತನೆ 121:3–4).

ಪ್ರಿಯ ದೇವರ ಮಕ್ಕಳೇ, ಎಂದಿಗೂ ನಿದ್ರಿಸದ ಸದಾ ಎಚ್ಚರವಾಗಿರುವ ಕರ್ತನನ್ನು ಪೂರ್ಣ ಹೃದಯದಿಂದ ಕೊಂಡಾಡುವಿರಾ? ಆತನ ಕಣ್ಣುಗಳು ನಿರಂತರವಾಗಿ ನಿಮ್ಮ ಮೇಲೆಯೇ ನೆಲೆಗೊಂಡಿವೆ.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಯೆಹೋವನಾದ ನಾನು ತೋಟಗಾರನು, ಕ್ಷಣಕ್ಷಣವೂ ನೀರು ಹೊಯ್ಯುತ್ತಿದ್ದೇನೆ; ಯಾರೂ ಮುಟ್ಟದ ಹಾಗೆ ಹಗಲಿರುಳೂ ಕಾಯುತ್ತೇನೆ” (ಯೆಶಾ 27:3).

Leave A Comment

Your Comment
All comments are held for moderation.