Appam, Appam - Kannada

ಜೂನ್ 10 – ಹೇಳಿದಂತೆಯೇ ಆಗುವದು!

“ಯಾವನಾದರೂ ಈ ಬೆಟ್ಟಕ್ಕೆನೀನು ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು ಎಂದು ಹೇಳಿ, ಮನಸ್ಸಿನಲ್ಲಿ ಸಂಶಯಪಡದೇ ತಾನು ಹೇಳಿದ್ದು ಆಗುವದೆಂದು ನಂಬಿದರೆ ಅವನು ಹೇಳಿದಂತೆಯೇ ಆಗುವದು.” (ಮಾರ್ಕ 11:23)

ನಾವು ಮಾತನಾಡುವ ಮಾತುಗಳನ್ನು ಕರ್ತನು ಗೌರವಿಸುತ್ತಾನೆ. ನೀತಿವಂತರು ಅರಿಕೆಮಾಡುವದು ನಡೆಯುತ್ತದೆ. (ಮಾರ್ಕ 11:23). ಸತ್ಯವೇದ ಹೇಳುತ್ತದೆ: “ಅವನ ಕಾರ್ಯವೆಲ್ಲವೂ ಸಫಲವಾಗುವದು.” (ಕೀರ್ತ 1:3)

ಮತ್ತು “ನೀನು ಯೇಸುವನ್ನೇ ಕರ್ತನೆಂದು ಬಾಯಿಂದ ಅರಿಕೆಮಾಡಿಕೊಂಡು ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನೆಂದು ಹೃದಯದಿಂದ ನಂಬಿದರೆ ನಿನಗೆ ರಕ್ಷಣೆಯಾಗುವದು.” (ರೋಮಾ 10:9,10)

ನಾವು ನಂಬಿಕೆಯಿಂದ ಹೀಗೆ ಘೋಷಿಸಿರಿ”ಆತನ ಗಾಯಗಳಿಂದ ನಿಮಗೆ ಗುಣವಾಯಿತು” (1 ಪೇತ್ರ 2:24), “ಆತನೇ ನಮ್ಮ ಬಲಹೀನತೆಗಳನ್ನು ಸಹಿಸಿಕೊಂಡು ನಮ್ಮ ರೋಗಗಳನ್ನು ಹೊತ್ತುಕೊಂಡನು” (ಮತ್ತಾ 8:17), “ನಿನ್ನನ್ನು ವಾಸಿಮಾಡುವ ಕರ್ತನು ನಾನೇ” (ವಿಮೋ 15:26), ಆಗ ನಾವು ಸ್ವಸ್ಥತೆಯನ್ನು ಮತ್ತು ಆರೋಗ್ಯವನ್ನು ಪಡೆದುಕೊಳ್ಳಬಹುದು.

ದೇವರು ಹೀಗೆ ಹೇಳಿದನು: “ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ ಎಂದಿಗೂ ತೊರೆಯುವದಿಲ್ಲವೆಂದು ಎಂದು ದೇವರು ತಾನೇ ಹೇಳಿದ್ದಾರೆ ” (ಇಬ್ರಿ 13:5), “ನನ್ನ ಸಾನ್ನಿಧ್ಯವು ನಿನ್ನ ಸಂಗಡ ಬರುವದು” (ವ33:14), “ಕರ್ತನು ನಮಗೆ ಸುತ್ತಲೂ ವಿಶ್ರಾಂತಿಯನ್ನು ಕೊಟ್ಟಿದ್ದಾನೆ” (2 ಪೂರ್ವ 14:7), ಆಗ ನಾವು ದೇವರ ಸನ್ನಿಧಿಯನ್ನು ಮತ್ತು ಸಹಭಾಗಿತ್ವವನ್ನು ಅನುಭವಿಸಲು ಪ್ರಾರಂಭಿಸುತ್ತೇವೆ.

ನಾವು ನಂಬಿಕೆಯಿಂದ ಹೀಗೆ ಹೇಳುವಾಗ: “ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಗಳನ್ನು ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ” (ಫಿಲಿಪ್ಪಿ 4:6), ಆಗ ನಾವು ಚಿಂತೆಯಿಂದ ಬಿಡುಗಡೆಯನ್ನು ಹೊಂದುತ್ತೇವೆ.

“ನನ್ನನ್ನು ಬಲಪಡಿಸುವಾತನಲ್ಲಿಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ.” (ಫಿಲಿಪ್ಪಿ 4:13), ಎಂದು ನಾವು ಅರಿಕೆ ಮಾಡುವಾಗ ನಮಗೆ ದೈವಿಕ ಬಲವು ದೊರಕುತ್ತದೆ.

ನಾವು ಹೀಗೆ ಹೇಳುವಾಗ: “ಯೆಹೋವನು ನನಗೆ ಕುರುಬನು ನಾನು ಕೊರತೆಪಡೆನು” (ಕೀರ್ತ 23:1), “ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ಚರ್ಯಕ್ಕೆ ತಕ್ಕ ಹಾಗೆ ನಿಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸುವನು. ” (ಫಿಲಿಪ್ಪಿ 4:19), ಆಗ ನಾವು ಯಾವುದೇ ಕೊರತೆಯಿಲ್ಲದೆ ಪರಿಪೂರ್ಣ ಜೀವನವನ್ನು ನಡೆಸಬಹುದು.

ಆಶೀರ್ವಾದಗಳನ್ನು ಪಡೆದುಕೊಳ್ಳಲು ನಾವು ಏನನ್ನು ಅರಿಕೆ ಮಾಡಬೇಕು?

“ನೀವು ನಿಮ್ಮ ದೇವರಾದ ಯೆಹೋವನ ಮಾತನ್ನು ಶ್ರದ್ಧೆಯಿಂದ ಕೇಳಿ ನಾನು ಈಗ ನಿಮಗೆ ಬೊಧಿಸುವ ಆತನ ಆಜ್ಞೆಗಳನ್ನೆಲ್ಲಾ ಅನುಸರಿಸಿ ನಡೆದರೆ ಆತನು ಭೂಮಿಯ ಮೇಲಿರುವ ಎಲ್ಲಾ ಜನಾಂಗಗಳಿಗಿಂತಲೂ ನಿಮ್ಮನ್ನು ಉನ್ನತ ಸ್ಥಿತಿಗೆ ತರುವನು. ನಿಮ್ಮ ದೇವರಾದ ಯೆಹೋವನ ಮಾತಿಗೆ ಕಿವಿಗೊಟ್ಟು ನಡೆದರೆ ಈ ಶುಭಗಳೆಲ್ಲಾ ನಿಮಗೆ ಪ್ರಾಪ್ತವಾಗುವವು. ಯಾವವಂದರೆ ನಿಮಗೆ ಊರಲ್ಲಿಯೂ ಅಡವಿಯಲ್ಲಿಯೂ ಶುಭವುಂಟಾಗುವದು ನಿಮ್ಮ ಸಂತಾನ ವ್ಯವಸಾಯಗಳಿಗೂ ದನಕುರಿ ಮುಂತಾದ ಪಶುಗಳಿಗೂ ಶುಭವುಂಟಾಗುವದು.

ನಿಮ್ಮ ಪುಟ್ಟಿಗಳಿಗೂ ಕೊಣವಿಗಳಿಗೂ ಶುಭವುಂಟಾಗುವದು. ನೀವು ಕೆಲಸಕ್ಕೆ ಹೋಗುವಾಗಲೂ ಬರುವಾಗಲೂ ಶುಭವುಂಟಾಗುವದು. ನಿಮ್ಮ ಮೇಲೆ ಬರುವ ಶತ್ರುಗಳು ನಿಮ್ಮಿಂದ ಸೋತುಹೋಗುವಂತೆ ಯೆಹೋವನು ಮಾಡುವನು. ಅವರು ಒಂದೇ ದಾರಿಯಿಂದ ನಿಮ್ಮ ಮೇಲೆ ಬಂದರೂ ಏಳು ದಾರಿಗಳಿಂದ ಓಡಿ ಹೋಗುವರು. ನಿಮ್ಮ ಕಣಜಗಳು ಯಾವಾಗಲೂ ತುಂಬಿರುವಂತೆಯೂ ನಿಮ್ಮ ಪ್ರಯತ್ನಗಳೆಲ್ಲಾ ಸಫಲವಾಗುವಂತೆಯೂ ನಿಮ್ಮ ದೇವರಾದ ಯೆಹೋವನು ನಿಮಗೆ ಶುಭವನ್ನು ಅನುಗ್ರಹಿಸುವನು. ಆತನು ನಿಮಗೆ ಕೊಡುವ ದೇಶದಲ್ಲಿ ನಿಮಗೆ ಶುಭವನ್ನೇ ಉಂಟುಮಾಡುವನು.” (ಧರ್ಮೋ 28:1-8)

ನೀವು ಈ ವಚನಗಳನ್ನು ನಂಬಿಕೆಯಿಂದ ಅರಿಕೆ ಮಾಡಿದರೆ, ಈ ಎಲ್ಲಾ ಆಶೀರ್ವಾದಗಳನ್ನು ಪಡೆದುಕೊಳ್ಳುವಿರಿ.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಕ್ರಿಸ್ತನು ನಮ್ಮ ನಿಮಿತ್ತ ಶಾಪವಾಗಿ ಧರ್ಮಶಾಸ್ತ್ರದಲ್ಲಿ ಹೇಳಿರುವ ಶಾಪದೊಳಗಿಂದ ನಮ್ಮನ್ನು ಬಿಡಿಸಿದನು. ಮರಕ್ಕೆ ತೂಗು ಹಾಕಲ್ಪಟ್ಟ ಪ್ರತಿಯೊಬ್ಬನು ಶಾಪಗ್ರಸ್ತನು ಎಂದು ಶಾಸ್ತ್ರದಲ್ಲಿ ಬರೆದದೆಯಲ್ಲಾ.” (ಗಲಾತ್ಯ 3:14)

Leave A Comment

Your Comment
All comments are held for moderation.