Appam, Appam - Kannada

ನವೆಂಬರ್ 19 – ಪಾಪದಿಂದ ಬಿಡುಗಡೆ!

“ನೀವು ಹಾಗೆ ಮಾಡದೆಹೋದರೆ ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದವರಾಗುವಿರಿ; ಮತ್ತು ನಿಮ್ಮ ಪಾಪವು ನಿಮ್ಮನ್ನು ಹಿಡಿಯುವ ತನಕ ಹುಡುಕಕೊಂಡೇ ಬರುವುದು ಎಂದು ತಿಳಿದುಕೊಳ್ಳಿರಿ.” ಅರಣ್ಯ 32:23

ಪಾಪವು ಭಯಾನಕವಾದದ್ದು. ಇಚ್ಛಾಪೂರ್ವಕವಾದ ಪಾಪಗಳು ಕುಟುಂಬದ ಮೇಲೆ ಶಾಪವನ್ನು ತರುತ್ತವೆ ಮತ್ತು ರೋಗಗಳಿಗೆ ಕಾರಣವಾಗುತ್ತವೆ. ಅಂತಿಮವಾಗಿ, ಅವು ಒಬ್ಬ ವ್ಯಕ್ತಿಯನ್ನು ದೇವರ ನ್ಯಾಯತೀರ್ಪಿಗೂ ಕೋಪಕ್ಕೂ ಗುರಿಮಾಡುತ್ತವೆ. ಪಾಪವು ಮೂಢನಾದವನನ್ನು ನಾಶನದ ಕಡೆಗೆ ಎಳೆದುಕೊಂಡು ಹೋಗುವ ಘೋರವಾದ, ಭಾರವಾದ ಕಲ್ಲಿನಂತಿದೆ. ತಮ್ಮ ಪಾಪಗಳನ್ನು ಮುಚ್ಚಿಕೊಳ್ಳುವವರು ಶುಭವಾಗುವುದಿಲ್ಲ, ಆದರೆ ಅವುಗಳನ್ನು ಅಡಗಿಸಿಕೊಳ್ಳದೆ ಒಪ್ಪಿಕೊಂಡು ಬಿಟ್ಟುಬಿಡುವವರು ಕರುಣೆಯನ್ನು ಹೊಂದುವರು ಎಂದು ಸತ್ಯವೇದವು ಎಚ್ಚರಿಸುತ್ತದೆ. (ಜ್ಞಾನೋ 28:13).

ಸ್ನಾನಿಕನಾದ ಯೋಹಾನನು ಕಠಿಣವಾಗಿ “ಪಶ್ಚಾತ್ತಾಪಪಡಿರಿ!” ಎಂದು ಸಾರಿದನು. ಪಶ್ಚಾತ್ತಾಪಪಡಲು ಬಯಸದ ಫರಿಸಾಯರನ್ನೂ ಸದ್ದುಕಾಯರನ್ನು ಆತನು “ಎಲೈ ಸರ್ಪಜಾತಿಯವರೇ” ಎಂದು ಕರೆದು, ಪಶ್ಚಾತ್ತಾಪಕ್ಕೆ ತಕ್ಕ ಫಲಗಳನ್ನು ನೀಡುವಂತೆ ಸವಾಲು ಹಾಕಿದನು (ಮತ್ತಾ 3:7–8). ಜನರು ಪಶ್ಚಾತ್ತಾಪಪಡಲು ನಿರಾಕರಿಸಿದಾಗ ಏನಾಗುತ್ತದೆ? ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಹಾಕುವರು ಎಂದು ಯೋಹಾನನು ಎಚ್ಚರಿಸಿದನು (ಮತ್ತಾ 3:10).

ಯೇಸುಕ್ರಿಸ್ತನೂ ಸಹ ಪಶ್ಚಾತ್ತಾಪವನ್ನು ಬೋಧಿಸಿದನು. ಸಮಸ್ತ ಸೃಷ್ಟಿಗೆ ಪಶ್ಚಾತ್ತಾಪವನ್ನು ಸಾರುವಂತೆ ಆತನು ತನ್ನ ಶಿಷ್ಯರಿಗೆ ಆಜ್ಞಾಪಿಸಿದನು, ಮತ್ತು ಅಪೊಸ್ತಲರು ಪಶ್ಚಾತ್ತಾಪಪಡುವ ಅಗತ್ಯತೆಯ ಬಗ್ಗೆ ಆಗಾಗ್ಗೆ ಬೋಧಿಸಿದರು.

ನಾವು ನಮ್ಮ ಪಾಪಗಳನ್ನು ಅರಿಕೆಗೆಡುವಾಗ, ದೇವರು ನಂಬಿಗಸ್ತನೂ ನೀತಿವಂತನೂ ಆಗಿದ್ದು ನಮ್ಮ ಪಾಪಗಳನ್ನು ಕ್ಷಮಿಸಿ ಸಕಲ ಪಾಪಗಳಿಂದ ನಮ್ಮನ್ನು ಶುದ್ಧೀಕರಿಸುವನು ಎಂದು ಸತ್ಯವೇದವು ನಮಗೆ ವಾಗ್ದಾನ ನೀಡುತ್ತದೆ. ಆತನ ಮಗನಾದ ಯೇಸುಕ್ರಿಸ್ತನ ರಕ್ತವು ಸಕಲ ಪಾಪಗಳನ್ನು ನಿವಾರಣಮಾಡಿ ನಮ್ಮನ್ನು ಶುದ್ದಿಮಾಡುತ್ತದೆ. (1 ಯೋಹಾ 1:7, 9).

ಅನೇಕ ಜನರು ಪಾಪದ ಅಭ್ಯಾಸಗಳಿಗೆ ದಾಸರಾಗಿದ್ದಾರೆ. ಪಶ್ಚಾತ್ತಾಪಪಡಲು, ಅವರಿಗೆ ಆ ಅಭ್ಯಾಸಗಳಿಂದ ಬಿಡುಗಡೆಯೂ ಬೇಕಾಗುತ್ತದೆ. ಈ ಸ್ವಾತಂತ್ರ್ಯವನ್ನು ಪಡೆಯಲು ಮೂರು ಪ್ರಮುಖ ಮಾರ್ಗಗಳಿವೆ.

ಮೊದಲನೆಯದಾಗಿ, ದೇವರ ಮಗನು ದಯಪಾಲಿಸುವ ಸ್ವಾತಂತ್ರ್ಯವಿದೆ. ಮಗನು ಯಾರನ್ನು ಸ್ವತಂತ್ರರನ್ನಾಗಿ ಮಾಡುವನೋ ಅವರು ನಿಜವಾಗಿಯೂ ಸ್ವತಂತ್ರರಾಗಿರುತ್ತಾರೆ ಎಂದು ಯೇಸು ಬೋಧಿಸಿದನು (ಯೋಹಾ 8:36).

ಎರಡನೆಯದಾಗಿ, ಸತ್ಯದ ಮೂಲಕ ಬರುವ ಸ್ವಾತಂತ್ರ್ಯವಿದೆ. ಸತ್ಯವನ್ನು ತಿಳಿಯುವುದರಿಂದ ಸ್ವಾತಂತ್ರ್ಯವು ಲಭಿಸುತ್ತದೆ ಎಂದು ಯೇಸು ಬೋಧಿಸಿದನು (ಯೋಹಾ 8:32).

ಮೂರನೆಯದಾಗಿ, ಪವಿತ್ರಾತ್ಮನು ದಯಪಾಲಿಸುವ ಸ್ವಾತಂತ್ರ್ಯವಿದೆ. ಕರ್ತನ ಆತ್ಮ ಎಲ್ಲಿದೆಯೋ ಅಲ್ಲಿ ಬಿಡುಗಡೆ ಉಂಟು (2 ಕೊರಿಂಥ 3:17).

ಒಬ್ಬ ವ್ಯಕ್ತಿಯು ಪಶ್ಚಾತ್ತಾಪಪಟ್ಟು ಪಾಪದಿಂದ ತಿರುಗಿಕೊಂಡಾಗ, ಮಹಾ ಸಂತೋಷವು ಹೃದಯವನ್ನು ತುಂಬುತ್ತದೆ. ನಾವು ದೇವರ ಮಕ್ಕಳಾಗಿದ್ದೇವೆ ಎಂದು ತಿಳಿದುಕೊಳ್ಳುವುದು ಎಂತಹ ಅದ್ಭುತವಾದ ಮತ್ತು ಸಂತೋಷದ ಸಂಗತಿಯಾಗಿದೆ! ಕುಟುಂಬದಲ್ಲಿ ಶಾಂತಿಯೂ ಸಂತೋಷವೂ ನೆಲೆಸುತ್ತದೆ, ಮತ್ತು ಪರಲೋಕದಲ್ಲೂ ಮಹಾ ಕೊಂಡಾಟವಿರುತ್ತದೆ. ದೇವರ ಕಡೆಗೆ ತಿರಿಗಿಕೊಳ್ಳುವ ಒಬ್ಬ ಪಾಪಿಯ ನಿಮಿತ್ತವೂ ಪರಲೋಕದಲ್ಲಿ ಬಹಳವಾಗಿ ಆನಂದವಾಗುತ್ತದೆ ಎಂದು ಯೇಸು ಸಾರಿದನು (ಲೂಕ 15:7).

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಆದಿಯಿಂದಲೂ ಸೈತಾನನು ಪಾಪಮಾಡುವವನಾಗಿದ್ದಾನಲ್ಲಾ ಸೈತಾನನ ಕೆಲಸಗಳನ್ನು ಲಯಮಾಡುವದಕ್ಕೋಸ್ಕರವೇ ದೇವಕುಮಾರನು ಪ್ರತ್ಯಕ್ಷನಾದನು” (1 ಯೋಹಾ 3:8).

Leave A Comment

Your Comment
All comments are held for moderation.