ಮೇ 23 – ದೇವರು ನಿಮ್ಮನ್ನು ಕೊನೆಯವರೆಗೂ ಮುನ್ನಡೆಸುವನು!
“ದೇವರು ಯುಗಯುಗಾಂತರಗಳಲ್ಲಿಯೂ ನಮ್ಮ ದೇವರು, ನಿರಂತರವೂ ನಮ್ಮನ್ನು ನಡಿಸುವವನಾಗಿದ್ದಾನೆ” .” (ಕೀರ್ತನೆ 48:14)
ಕರ್ತನು ನಮ್ಮನ್ನು ಸಂಪೂರ್ಣವಾಗಿ—ಎಲ್ಲಾ ಕಾಲದಲ್ಲೂ ಮತ್ತು ಮರಣದ ತನಕವೂ ಮುನ್ನಡೆಸುವನು. ಅದಕ್ಕಾಗಿಯೇ ಆತನು ಯುಗದ ಸಮಾಪ್ತಿಯವರೆಗೂ ಸದಾಕಾಲವೂ ನಿಮ್ಮ ಸಂಗಡ ಇರುತ್ತೇನೆ ಎಂದು ವಾಗ್ದಾನ ಮಾಡಿದ್ದಾನೆ (ಮತ್ತಾ 28:20).
ಜೀವನದ ವಿವಿಧ ಹಂತಗಳು:
ಬಾಲ್ಯದಲ್ಲಿ ಪೋಷಕರು ನಮಗೆ ಮಾರ್ಗದರ್ಶನ ನೀಡುತ್ತಾರೆ
ವಿಧ್ಯಾಭ್ಯಾಸದ ಸಮಯದಲ್ಲಿ ಶಿಕ್ಷಕರು ನಮಗೆ ದಾರಿ ತೋರಿಸುತ್ತಾರೆ
ಉದ್ಯೋಗದಲ್ಲಿ ಮೇಲಧಿಕಾರಿಗಳು ನಮ್ಮನ್ನು ನಡೆಸುತ್ತಾರೆ
ಆದರೆ ನಮ್ಮನ್ನು ಕೊನೆಯವರೆಗೂ ಮುನ್ನಡೆಸುವವನು ನಮ್ಮ ದೇವರಾದ ಕರ್ತನು ಒಬ್ಬನೇ. ಆತನು ಮಾತ್ರ ಎಂದೆಂದಿಗೂ ನಮ್ಮ ಮಾರ್ಗದರ್ಶಕನಾಗಿ ಉಳಿಯುತ್ತಾನೆ.
ಜೀವನವು ಮರಣದೊಂದಿಗೆ ಕೊನೆಗೊಳ್ಳುತ್ತದೆಯೇ? ಇಲ್ಲ. ಮರಣದ ನಂತರವೂ ಕರ್ತನು ನಮ್ಮನ್ನು ತನ್ನ ನಿತ್ಯರಾಜ್ಯಕ್ಕೆ ಮುನ್ನಡೆಸುತ್ತಾನೆ—ಬೆಳಕಿನ ರಾಜ್ಯಕ್ಕೆ; ರಾತ್ರಿಯೇ ಇಲ್ಲದ ರಾಜ್ಯಕ್ಕೆ ಮತ್ತು ಜೀವದ ನೀರಿನ ಬುಗ್ಗೆಗಳ ಕಡೆಗೆ ಆತನು ನಮ್ಮನ್ನು ನಡೆಸುತ್ತಾನೆ.
ದಾವೀದನು ತನ್ನ ಜೀವನವನ್ನು ಕರ್ತನ ಕೈಗೆ ಒಪ್ಪಿಸಿಕೊಟ್ಟು, ಆತನನ್ನು ತನ್ನ ಕುರುಬನೆಂದು ಸ್ವೀಕರಿಸಿದನು. ಕೊನೆಯಲ್ಲಿ ಆತನು ಪೂರ್ಣ ಭರವಸೆಯಿಂದ ಹೀಗೆ ಘೋಷಿಸಿದನು: “ನನ್ನ ಜೀವಮಾನವೆಲ್ಲಾ ಶುಭವೂ ಕೃಪೆಯೂ ನನ್ನನ್ನು ಹಿಂಬಾಲಿಸುವವು; ನಾನು ಯೆಹೋವನ ಮಂದಿರದಲ್ಲಿ ಯುಗಯುಗಾಂತರಕ್ಕೂ ಸದಾಕಾಲವೂ ವಾಸಮಾಡುವೆನು.” (ಕೀರ್ತ 23:6). ಇದು ಆತನ ಧೃಡವಾದ ನಂಬಿಕೆಯಾಗಿತ್ತು.
ಪೌಲನ ಜೀವನವನ್ನು ಗಮನಿಸಿರಿ. ದಮಸ್ಕದ ಹಾದಿಯಲ್ಲಿ ಕರ್ತನು ಆತನನ್ನು ಸಂಧಿಸಿದಾಗ, ಆತನು ತನ್ನನ್ನು ತಾನು ಸಂಪೂರ್ಣವಾಗಿ ಒಪ್ಪಿಸಿಕೊಡುತ್ತಾ, “ಕರ್ತನೇ, ನಾನು ಏನು ಮಾಡಬೇಕೆಂದು ಅಪೇಕ್ಷಿಸುತ್ತೀ?” ಎಂದು ಕೇಳಿದನು. ಅಂದಿನಿಂದ ಆತನು ಪವಿತ್ರಾತ್ಮನು ನಡೆಸಿದ ಕಡೆಗೆ ಹೋದನು; ದೇವರ ನಿರ್ದೇಶನದಂತೆ ಸೇವೆ ಮಾಡಿದನು; ಮತ್ತು ದೈವಿಕ ಪ್ರೇರಣೆಯಿಂದ ಪತ್ರಿಕೆಗಳನ್ನು ಬರೆದನು. ಆತನು ಹೀಗೆ ದೃಢಪಡಿಸಿದನು: “ಈ ಒಳ್ಳೇ ಕೆಲಸವನ್ನು ನಿಮ್ಮಲ್ಲಿ ಪ್ರಾರಂಭಿಸಿದಾತನು ಅದನ್ನು ನಡಿಸಿಕೊಂಡು ಯೇಸುಕ್ರಿಸ್ತನು ಬರುವ ದಿನದೊಳಗಾಗಿ ಸಿದ್ಧಿಗೆ ತರುವನೆಂದು ನನಗೆ ಭರವಸವುಂಟು .” (ಫಿಲಿಪ್ಪಿ 1:6)
ತನ್ನ ಜೀವನದ ಕೊನೆಯಲ್ಲಿ ಪೌಲನು ಹೀಗೆ ಘೋಷಿಸಿದನು: “ಯಾಕಂದರೆ ನಾನಂತೂ ಈ ಗಲೇ ಪಾನದ್ರವ್ಯವಾಗಿ ಅರ್ಪಿತನಾಗುತ್ತಾ ಇದ್ದೇನೆ; ನಾನು ಹೊರಟುಹೋಗಬೇಕಾದ ಸಮಯವು ಸಮೀಪಕ್ಕೆ ಬಂದಿದೆ. ಶ್ರೇಷ್ಟ ಹೋರಾಟವನ್ನು ಮಾಡಿದ್ದೇನೆ, ನನ್ನ ಓಟವನ್ನು ಕಡೆಗಾಣಿಸಿದ್ದೇನೆ, ಕ್ರಿಸ್ತ ನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ. .” (2 ತಿಮೊಥೆ 4:6–8). ಎಂತಹ ಜಯಶಾಲಿಯಾದ ಮುಕ್ತಾಯ!
ಪ್ರೀತಿಯ ದೇವರ ಮಕ್ಕಳೇ, ಯೇಸುಕ್ರಿಸ್ತನೇ ಎಂದೆಂದಿಗೂ ನಿಮ್ಮ ದೇವರಾಗಿದ್ದಾನೆ. ಆತನು ಹೀಗೆ ವಾಗ್ದಾನ ಮಾಡಿದ್ದಾನೆ: “ಸಿಂಹಾಸನದ ಮಧ್ಯದಲ್ಲಿರುವ ಯಜ್ಞದ ಕುರಿಯಾದಾತನು ಾವರಿಗೆ ಕುರುಬನಂತಿದ್ದು ಜೀವಜಲದ ಒರತೆಗಳ ಬಳಿಗೆ ನಡಿಸುತ್ತಾನೆ.” (ಪ್ರಕ 7:17)
ಆತನು ನಿಮ್ಮನ್ನು ಜೀವನದಲ್ಲಿ ಮುನ್ನಡೆಸುವನು; ಮರಣದ ಮೂಲಕವೂ ಮುನ್ನಡೆಸುವನು; ಮತ್ತು ನಿತ್ಯತ್ವದ ಕಡೆಗೂ ನಿಮ್ಮನ್ನು ಮುನ್ನಡೆಸುವನು.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ:
“ಬೆಟ್ಟಗಳು ಉಂಟಾಗುವದಕ್ಕಿಂತ, ಭೂಮಿಯೂ ಅದರ ದೇಶಗಳೂ ನಿರ್ಮಾಣವಾಗುವದಕ್ಕಿಂತ ಮುಂಚಿನಿಂದ ಯುಗಯುಗಾಂತರಗಳಲ್ಲಿಯೂ ನೀನೇ ದೇವರು” (ಕೀರ್ತ 90:2)