Appam, Appam - Kannada

ಸೆಪ್ಟೆಂಬರ್ 28 – ಒಬ್ಬರನ್ನೊಬ್ಬರು ಪ್ರೀತಿಸಿರಿ!

“ಕ್ರೈಸ್ತ ಸಹೋದರರು ಅಣ್ಣತಮ್ಮಂದಿರೆಂದು ಒಬ್ಬರನ್ನೊಬ್ಬರು ಪ್ರೀತಿಸಿರಿ.” (ರೋಮಾ 12:10)

ಇಸ್ರಾಯೇಲ್ ದೇಶದಲ್ಲಿ ಇಬ್ಬರು ಸಹೋದರರಿದ್ದರು. ಹಿರಿಯ ಸಹೋದರನಿಗೆ ಮದುವೆಯಾಗಿ ಹೆಂಡತಿ ಮತ್ತು ಮಕ್ಕಳಿದ್ದರು, ಆದರೆ ಕಿರಿಯ ಸಹೋದರನು ಅವಿವಾಹಿತನಾಗಿದ್ದನು. ಅವರಿಬ್ಬರೂ ಗೋಧಿಯನ್ನು ಕಟಾವು ಮಾಡಿ ತಮ್ಮ ಧಾನ್ಯಗಳನ್ನು ತಮ್ಮ ತಮ್ಮ ಕಣಜಗಳಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದರು. ಒಂದು ರಾತ್ರಿ, ಅವರಿಬ್ಬರಲ್ಲಿ ಯಾರಿಗೂ ನಿದ್ರೆ ಬರಲಿಲ್ಲ.

ಹಿರಿಯ ಸಹೋದರನು ತನ್ನಲ್ಲಿ ತಾನು ಯೋಚಿಸಿಕೊಂಡನು, “ನನ್ನ ಸಹೋದರನು ಸಾತ್ವಿಕನು! ಆತನು ಅವಿವಾಹಿತನಾಗಿದ್ದಾನೆ. ನನಗೆ ಇಬ್ಬರು ಮಕ್ಕಳಿದ್ದಾರೆ, ಮತ್ತು ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡುತ್ತೇವೆ. ನನ್ನ ಕಿರಿಯ ಸಹೋದರನಿಗೆ ಒಳ್ಳೆಯದಾಗಲಿ.” ಆದ್ದರಿಂದ, ರಾತ್ರಿಯ ಸಮಯದಲ್ಲಿ, ಆತನು ತನ್ನ ಸ್ವಂತ ಕಣಜದಿಂದ ಒಂದು ಹಿಂಡಿ ಗೋಧಿಯನ್ನು ತೆಗೆದುಕೊಂಡು, ಅದನ್ನು ತನ್ನ ಸಹೋದರನ ಕಣಜಕ್ಕೆ ಸಾಗಿಸಿ, ನಿರಾಳಭಾವದಿಂದ ಹಿಂತಿರುಗಿದನು.

ಅದೇ ರಾತ್ರಿ, ಕಿರಿಯ ಸಹೋದರನೂ ಎದ್ದು ಯೋಚಿಸಿದನು, “ನನ್ನ ಹಿರಿಯ ಸಹೋದರನು ತುಂಬಾ ಒಳ್ಳೆಯವನು! ಆತನು ಕಾಳಜಿ ವಹಿಸಲು ಇಬ್ಬರು ಮಕ್ಕಳನ್ನು ಹೊಂದಿದ್ದಾನೆ. ಅಂತಹ ದೊಡ್ಡ ಕುಟುಂಬಕ್ಕೆ ಒದಗಿಸುವುದು ಆತನಿಗೆ ಎಷ್ಟು ಕಷ್ಟಕರವಾಗಿರಬೇಕು.” ಆದ್ದರಿಂದ ಆತನು ತನ್ನ ಸ್ವಂತ ಕಣಜದಿಂದ ಒಂದು ದೊಡ್ಡ ಹಿಂಡಿ ಧಾನ್ಯವನ್ನು ತೆಗೆದುಕೊಂಡು ಅದನ್ನು ತನ್ನ ಸಹೋದರನ ಕಣಜದಲ್ಲಿ ಇರಿಸಿದನು.

ಇದು ಹಲವು ರಾತ್ರಿಗಳು ಮುಂದುವರಿಯಿತು. ಪ್ರತಿಯೊಬ್ಬ ಸಹೋದರನು, ಇತರರ ಬಗ್ಗೆ ಪ್ರೀತಿ ಮತ್ತು ಕಾಳಜಿಯಿಂದ, ಧಾನ್ಯಗಳನ್ನು ಮತ್ತು ಇತರ ಆಹಾರ ಪದಾರ್ಥಗಳನ್ನು ತನ್ನ ಸಹೋದರನ ಕಣಜಕ್ಕೆ ಕದ್ದು ಮುಚ್ಚಿ ಸಾಗಿಸುತ್ತಿದ್ದನು.

ಒಂದು ರಾತ್ರಿ, ಅವರಿಬ್ಬರೂ ಪರಸ್ಪರ ಧಾನ್ಯಗಳನ್ನು ಸಾಗಿಸುತ್ತಿದ್ದಾಗ, ಅನಿರೀಕ್ಷಿತವಾಗಿ ಭೇಟಿಯಾದರು. ಕಿರಿಯ ಸಹೋದರನು ತನ್ನ ಹಿರಿಯ ಸಹೋದರನನ್ನು ಅಪ್ಪಿಕೊಂಡು ಹೇಳಿದನು, “ಅಣ್ಣಾ, ನಾನು ಇದನ್ನು ನಿನಗಾಗಿ ತರುತ್ತಿದ್ದೆ.” ಹಿರಿಯ ಸಹೋದರನು ತನ್ನ ಕಿರಿಯ ಸಹೋದರನನ್ನು ಅಪ್ಪಿಕೊಂಡು ಉತ್ತರಿಸಿದನು, “ನನ್ನ ಪ್ರೀತಿಯ ಸಹೋದರ, ನಾನು ಇದನ್ನು ನಿನಗಾಗಿ ತರುತ್ತಿದ್ದೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ.” ಆ ಇಬ್ಬರು ಸಹೋದರರು ಪರಸ್ಪರ ಅಪ್ಪಿಕೊಂಡು ಅತ್ತರು.

ಕರ್ತನು ಅವರನ್ನು ನೋಡಿ ಹೇಳಿದನು, “ನನ್ನ ಮಕ್ಕಳ ನಡುವಿನ ಅಂತಹ ಸಹೋದರ ಪ್ರೀತಿಯ ಅಡಿಪಾಯದ ಮೇಲೆ, ನಾನು ವಾಸಿಸುವ ಸ್ಥಳವನ್ನು ಹೊಂದಲು ಬಯಸುತ್ತೇನೆ” ಎಂದು ಹೇಳಲಾಗಿದೆ ಎಂದು ತಿಳಿಯಲಾಗಿದೆ.

ಪ್ರೀತಿಯ ದೇವರ ಮಕ್ಕಳೇ, ಕ್ರಿಸ್ತನ ಸ್ವಭಾವವು ನಿಮ್ಮಲ್ಲಿ ರೂಪುಗೊಳ್ಳಲಿ. ಕ್ರಿಸ್ತನು ದಯೆಯುಳ್ಳವನು, ಕರುಣೆಯುಳ್ಳವನು ಮತ್ತು ಕ್ಷಮಿಸುವವನು ಆಗಿರುವಂತೆಯೇ, ಇತರರನ್ನು ಪೂರ್ಣ ಹೃದಯದಿಂದ ಕ್ಷಮಿಸಿ.

“ಒಬ್ಬರನ್ನೊಬ್ಬರು ಸಹಿಸಿಕೊಳ್ಳುತ್ತಾ, ಒಬ್ಬರನ್ನೊಬ್ಬರು ಕ್ಷಮಿಸುತ್ತಾ…” (ಕೊಲೊಸ್ಸೆ 3:13) ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಪ್ರೀತಿಯನ್ನು ಧರಿಸಿ: “ಇದೆಲ್ಲಾದರ ಮೇಲೆ ಪ್ರೀತಿಯನ್ನು ಧರಿಸಿಕೊಳ್ಳಿರಿ. ಅದು ಸಮಸ್ತವನ್ನು ಸಂಪೂರ್ಣಮಾಡುವ ಬಮಧವಾಗಿದೆ.” (ಕೊಲೊಸ್ಸೆ 3:14)

ದೇವರು ಪ್ರೀತಿಯಾಗಿದ್ದಾನೆ. ನೀವು ಪ್ರೀತಿಸ್ವರೂಪನಾದ ಯೇಸುಕ್ರಿಸ್ತನ ಮಕ್ಕಳಾಗಿರುವುದರಿಂದ, ಆತನ ದೈವಿಕ ಪ್ರೀತಿಯನ್ನು ನೀವು ಧರಿಸಿಕೊಳ್ಳಬೇಕು.

ನಿಮ್ಮ ಹೃದಯದಲ್ಲಿ ಪ್ರೀತಿ ಇಲ್ಲದಿದ್ದರೆ, “ನಾನು ಅಭಿಷೇಕವನ್ನು ಹೊಂದಿದ್ದೇನೆ; ನಾನು ದೀಕ್ಷಾಸ್ನಾನ ಪಡೆದಿದ್ದೇನೆ; ನಾನು ಪರಲೋಕಕ್ಕೆ ಹೋಗುತ್ತಿದ್ದೇನೆ” ಎಂದು ಹೇಳುವುದರಲ್ಲಿ ಏನು ಪ್ರಯೋಜನವಿದೆ?

ಅಪೊಸ್ತಲನಾದ ಪೌಲನು 1 ಕೊಲೊಸ್ಸೆಯವರಿಗೆ 13 ರಲ್ಲಿ ಇದನ್ನು ಸ್ಪಷ್ಟಪಡಿಸುತ್ತಾನೆ. ಒಬ್ಬ ವ್ಯಕ್ತಿಯು ಅದ್ಭುತವಾದ ಆತ್ಮೀಕ ವರಗಳಿಂದ ಮಾತನಾಡಿದರೂ, ಪ್ರವಾದನಾ ವರವನ್ನು ಹೊಂದಿದ್ದರೂ, ಮರ್ಮಗಳನ್ನು ಅರ್ಥಮಾಡಿಕೊಂಡಿದ್ದರೂ ಮತ್ತು ಶ್ರೇಷ್ಟ ನಂಬಿಕೆಯನ್ನು ಹೊಂದಿದ್ದರೂ, ಪ್ರೀತಿಯಿಲ್ಲದಿದ್ದರೆ, ಅವೆಲ್ಲವೂ ಶೂನ್ಯವಾಗುತ್ತವೆ. “ನಾನು ಮನುಷ್ಯರ ಭಾಷೆಗಳನ್ನೂ ದೇವದೂತರ ಭಾಷೆಗಳನ್ನೂ ಆಡುವವನಾದರೂ ಪ್ರೀತಿಯಿಲ್ಲದಿದ್ದರೆ, ನಾದ ಕೊಡುವ ಕಂಚೂ ಗಣಗಣಿಸುವ ತಾಳವೂ ಆಗಿದ್ದೇನೆ.” (1 ಕೊರಿಂಥ 13:1)

ದೇವರು ನಮ್ಮನ್ನು ಬಹಳವಾಗಿ ಪ್ರೀತಿಸಿರುವುದರಿಂದ, ನಾವು ಒಬ್ಬರನ್ನೊಬ್ಬರು ಪ್ರೀತಿಸುವ ಋಣದಲ್ಲಿದ್ದೇವೆ. ಕ್ರಿಸ್ತನ ಪ್ರೀತಿಯು ನಮ್ಮನ್ನು ಒಗ್ಗೂಡಿಸುವ ಬಂಧವಾಗಿರಲಿ, ನಮ್ಮನ್ನು ಕ್ಷಮಿಸಲು ಶಕ್ತಗೊಳಿಸುವ ಕೃಪೆಯಾಗಿರಲಿ ಮತ್ತು ನಾವು ಎಲ್ಲಿಗೆ ಹೋದರೂ ಕ್ರಿಸ್ತನ ಪರಿಮಳವಾಗಿರಲಿ.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಪ್ರಿಯರೇ, ದೇವರು ನಮ್ಮನ್ನು ಹೀಗೆ ಪ್ರೀತಿಸಿದ ಮೇಲೆ ನಾವು ಒಬ್ಬರನ್ನೊಬ್ಬರು ಪ್ರೀತಿಸುವ ಹಂಗಿನಲ್ಲಿದ್ದೇವೆ.” (1 ಯೋಹಾ 4:11)

Leave A Comment

Your Comment
All comments are held for moderation.