Appam, Appam - Kannada

ಜುಲೈ 16 – ಈ ದಿನವೇ ಸಾಪಲ್ಯತೆ ನೀಡು!

“ನನ್ನ ದಣಿಯಾದ ಅಬ್ರಹಾಮನ ದೇವರಾಗಿರುವ ಯೆಹೋವನೇ, ಈ ಹೊತ್ತು ನಾನು ಬಂದ ಕಾರ್ಯವನ್ನು ನೀನು ಅನೂಕೂಲಪಡಿಸಿ ನನ್ನ ದಣಿಯಾದ ಅಬ್ರಹಾಮನಿಗೆ ಉಪಕಾರಮಾಡಬೇಕೆಂದು ಬೇಡುತ್ತೇನೆ.” (ಆದಿ 24:12)

ನಮ್ಮ ಅತ್ಯಾಸಕ್ತಿಯ ಪ್ರಾರ್ಥನೆಗಳು ಮತ್ತು ಪ್ರಯತ್ನಗಳ ಹೊರತಾಗಿಯೂ ಕೆಲವು ವಿಷಯಗಳು ವಿಳಂಬವಾಗುತ್ತಿರುವಂತೆ ತೋರುತ್ತವೆ. ನಾವು ದೇವರ ಆಶೀರ್ವಾದಗಳನ್ನು ಹೊಂದಿಕೊಳ್ಳಲು ಹಂಬಲಿಸುತ್ತೇವೆ, ಆದರೆ ಅದರ ನೆರವೇರಿಸುವಿಕೆಯು ಮುಂದೂಡಲ್ಪಟ್ಟಂತೆ ಕಾಣುತ್ತದೆ. ಅಂತಹ ಸಮಯಗಳಲ್ಲಿ, ನಾವು ಎಲೀಯೆಜರನು ಪ್ರಾರ್ಥಿಸಿದಂತೆ ಪ್ರಾರ್ಥಿಸೋಣ: “ಕರ್ತನೇ, ಈ ದಿನ ನನಗೆ ಸಫಲತೆಯನ್ನು ನೀಡು.”

ಒಂದು ಕಾರ್ಯವನ್ನು ಸಫಲಗೊಳಿಸುವವನು ಕರ್ತನೇ ಆಗಿದ್ದಾನೆ. ಆತನ ಅನುಗ್ರಹವಿಲ್ಲದೆ, ನಾವು ಎಷ್ಟೇ ಕಷ್ಟಪಟ್ಟರೂ ನಮ್ಮ ಸಮಯ, ಸಂಪನ್ಮೂಲಗಳು ಮತ್ತು ಪ್ರಯತ್ನಗಳು ವ್ಯರ್ಥವಾಗಬಹುದು. ಆದ್ದರಿಂದ, ನಮ್ಮ ಮುಂದೆ ಯಾವುದೇ ಕೆಲಸವಿದ್ದರೂ, ಯಥಾರ್ಥ ಹೃದಯದಿಂದ ಆತನನ್ನು ಹುಡುಕಿ, “ಕರ್ತನೇ, ಇಂದು ನನ್ನ ಮಾರ್ಗವನ್ನು ಸಫಲ ಮಾಡು,” ಎಂದು ಪ್ರಾರ್ಥಿಸೋಣ.

ಅಬ್ರಹಾಮನು ತನ್ನ ಸೇವಕನಾದ ಎಲೀಯೆಜರನಿಗೆ ಒಂದು ದೊಡ್ಡ ಜವಾಬ್ದಾರಿಯನ್ನು ವಹಿಸಿದ್ದನು—ಅದು ತನ್ನ ಮಗನಾದ ಇಸಾಕನಿಗೆ ಯೋಗ್ಯಳಾದ ಹೆಂಡತಿಯನ್ನು ಹುಡುಕುವುದು. ಆ ಕೆಲಸಕ್ಕೆ ಜ್ಞಾನ, ವಿವೇಕ ಮತ್ತು ದೈವಿಕ ಮಾರ್ಗದರ್ಶನದ ಅಗತ್ಯವಿತ್ತು. ಎಲೀಯೆಜರನು ಈ ಮುಖ್ಯವಾದ ಕಾರ್ಯಾಚರಣೆಗೆ ಹೊರಟಾಗ, ಅವನು ಅತ್ಯಾಸಕ್ತಿಯಿಂದ ಹೀಗೆ ಪ್ರಾರ್ಥಿಸಿದನು:

“ನನ್ನ ದಣಿಯಾದ ಅಬ್ರಹಾಮನ ದೇವರಾಗಿರುವ ಯೆಹೋವನೇ, ಈ ಹೊತ್ತು ನಾನು ಬಂದ ಕಾರ್ಯವನ್ನು ನೀನು ಅನೂಕೂಲಪಡಿಸಿ ನನ್ನ ದಣಿಯಾದ ಅಬ್ರಹಾಮನಿಗೆ ಉಪಕಾರಮಾಡಬೇಕೆಂದು ಬೇಡುತ್ತೇನೆ.” (ಆದಿ 24:12)

ಕರ್ತನು ಅವನ ಪ್ರಾರ್ಥನೆಗೆ ಕೂಡಲೇ ಉತ್ತರಿಸಿದನು. ಎಲೀಯೆಜರನು ತನ್ನ ಹೃದಯದಲ್ಲಿ ನಿರೀಕ್ಷಿಸಿದಂತೆಯೇ, ರೆಬೆಕ್ಕಳು ಬಂದು ಅವನಿಗೂ ಅವನ ಒಂಟೆಗಳಿಗೂ ಸಂತೋಷದಿಂದ ನೀರನ್ನು ಕೊಟ್ಟಳು. ಈ ಗಮನಾರ್ಹವಾದ ದೈವಿಕ ಮುನ್ನಡೆಸುವಿಕೆಯ ಮೂಲಕ, ದೇವರು ತನ್ನನ್ನು ಸರಿಯಾದ ವ್ಯಕ್ತಿಯ ಬಳಿಗೆ ನಡೆಸಿದ್ದಾನೆ ಎಂಬುದನ್ನು ಎಲೀಯೆಜರನು ಗುರುತಿಸಿದನು.

ಆತನು ದೇವರ ಹಸ್ತವು ಕೆಲಸ ಮಾಡುತ್ತಿರುವುದನ್ನು ಕಂಡಾಗ,ಆರಾಧನೆಯೊಂದಿಗೆ ಹೀಗೆ ಪ್ರತಿಕ್ರಿಯಿಸಿದನು: “ನನ್ನ ದಣಿಯಾದ ಅಬ್ರಹಾಮನ ದೇವರಾದ ಯೆಹೋವನಿಗೆ ಬೊಗ್ಗಿ ನಮಸ್ಕರಿಸಿ ಆತನು ನನ್ನ ಮಗನಿಗೋಸ್ಕರ ಅವನ ತಮ್ಮನ ಮಗಳನನ್ನೇ ತೆಗೆದುಕೊಳ್ಳುವಂತೆ ನನ್ನನ್ನು ನೀಟಾದ ದಾರಿಯಲ್ಲಿ ಕರೆದುಕೊಂಡು ಬಂದದ್ದಕ್ಕಾಗಿ ಆತನನ್ನು ಕೊಂಡಾಡಿದರು.” (ಆದಿಕ 24:48)

ಬಹುಶಃ ನಿಮ್ಮ ಮಕ್ಕಳ ವಿವಾಹದ ಕಾರ್ಯಗಳು ವಿಳಂಬವಾಗಿರಬಹುದು. ಮನೆ ಕಟ್ಟುವ ನಿಮ್ಮ ಯೋಜನೆಗಳು ಕಾರ್ಯರೂಪಕ್ಕೆ ಬರದೇ ಬಹುದು. ನಿಮ್ಮ ಮಕ್ಕಳ ಉದ್ಯೋಗ, ಶಿಕ್ಷಣ ಅಥವಾ ಭವಿಷ್ಯದ ವಿಷಯಗಳಲ್ಲಿ ಅಡೆತಡೆಗಳು ಎದುರಾಗಿರಬಹುದು.

ಎಲೀಯೆಜರನಂತೆ ಪ್ರಾರ್ಥಿಸಿರಿ: “ಕರ್ತನೇ, ಇಂದು ನನಗೆ ಸಫಲತೆಯನ್ನು ದಯಪಾಲಿಸು.” ಖಂಡಿತವಾಗಿಯೂ ಕರ್ತನು ಶುಭ ಸುದ್ದಿಯೊಂದಿಗೆ ನಿಮ್ಮನ್ನು ಪ್ರೋತ್ಸಾಹಿಸುವನು. ಮಾರ್ಗವೇ ಇಲ್ಲದ ಚಡಪಡಿಕೆಯಲ್ಲಿ ಆತನು ನಿಮಗೊಂದು ಮಾರ್ಗವನ್ನು ತೆರೆಯುವನು. ನೀವು ನಡೆಯಬೇಕಾದ ಹಾದಿಯನ್ನು ತೋರಿಸಿ, ಆತನೇ ತನ್ನ ಕೈಗಳಿಂದ ನಿಮ್ಮನ್ನು ಮುನ್ನಡೆಸುವನು.

ಸಂತೋಷಪಡಿರಿ ಮತ್ತು ಕರ್ತನನ್ನು ಸ್ತುತಿಸಿರಿ. ಇಂದು ನಿಮ್ಮ ಭಾರಗಳು ಇಳಿಯಲು ಪ್ರಾರಂಭಿಸುವ ಮತ್ತು ಆತನ ಶಾಂತಿಯು ನಿಮ್ಮ ಹೃದಯವನ್ನು ತುಂಬುವ ದಿನವಾಗಿರಬಹುದು. “ಕರ್ತನು ನನ್ನ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾನೆ. ಆತನೇ ನನ್ನನ್ನು ಮುನ್ನಡೆಸುವನು. ನನ್ನ ಚಿಂತಾಭಾರವನ್ನು ಆತನೇ ವಹಿಸಿಕೊಳ್ಳುವನು. ಆತನನ್ನು ಪ್ರೀತಿಸುವವರ ಹಿತಕ್ಕಾಗಿ ಎಲ್ಲಾ ಕಾರ್ಯಗಳು ಅನುಕೂಲವಾಗುತ್ತವೆ,” ಎಂದು ನೀವು ಅರಿಕೆಮಾಡುವ ನಿಮ್ಮೊಳಗೆ ನಂಬಿಕೆಯು ಹೆಚ್ಚಾಗುತ್ತದೆ.

ಆ ಭರವಸೆಯು ನಿಮ್ಮ ಹೃದಯವನ್ನು ತುಂಬುವಾಗ, ಆತನನ್ನು ಸ್ತುತಿಸಿ ಮಹಿಮೆಪಡಿಸಿರಿ. ದೇವರ ಮಕ್ಕಳೇ, ಇಂದು ದೈವಿಕ ಸಾಧನೆಯ ದಿನವಾಗಬಹುದು.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಯೆಹೋವನು ಈ ಹೊತ್ತು ಇಸ್ರಾಯೇಲ್ಯರಿಗೆ ಜಯವನ್ನುಂಟುಮಾಡಿದ್ದಾನೆ.” (1 ಸಮು 11:13)

Leave A Comment

Your Comment
All comments are held for moderation.