ಸೆಪ್ಟೆಂಬರ್ 12 – ಆದಿ ಸಾಗರದ ಮೇಲೆ ಕಾರ್ಗತ್ತಲು!
“ಆದಿ ಸಾಗರದ ಮೇಲೆಕತ್ತಲಿತ್ತು; ದೇವರಾತ್ಮವು ಜಲಸಮೂಹಗಳ ಮೇಲೆ ಚಲಿಸುತ್ತಿತ್ತ.” (ಆದಿ 1:2)
ಅಸ್ವಸ್ಥತೆಯು ಕತ್ತಲಿಗೆ ಸಂಬಂಧಿಸಿರುತ್ತದೆ. ಪಾಪದ ಜೀವನವು ಕತ್ತಲಲ್ಲಿ ನಡೆಯುವುದು ಎಂದು ಬಣ್ಣಿಸಲಾಗಿದೆ. ಕತ್ತಲೆಯು ಕಾಡು ಮತ್ತು ಅಪಾಯಕಾರಿ ಪ್ರಾಣಿಗಳು ಹೊರಬರುವ ಸಮಯವೂ ಆಗಿದೆ. ದುಷ್ಟರು ಅಧಿಕಾರಕ್ಕೆ ಬಂದು ಆಳ್ವಿಕೆ ಮಾಡುವಾಗ, ದೇಶದ ಮೇಲೆ ಕತ್ತಲೆಯು ಹರಡಬಹುದು.
ಇಂದು ಲೋಕದಲ್ಲಿ ಪಾಪಿಗಳು, ದುಷ್ಟರು ಮತ್ತು ಅಕ್ರಮ ಮಾಡುವವರು ಬಹಳವಾಗಿ ಹೆಚ್ಚಿದ್ದಾರೆ. ಲೋಕವು ದಟ್ಟವಾದ ಕತ್ತಲೆಯ ಕಡೆಗೆ ಮತ್ತು ಅಂತ್ಯ ಕ್ರಿಸ್ತನ ಆಳ್ವಿಕೆಯ ಕಡೆಗೆ ಸಾಗುತ್ತಿದೆ. ಸತ್ಯವೇದವು ಹೇಳುತ್ತದೆ: “ಇಗೋ, ಕತ್ತಲು ಭೂಮಿಯನ್ನೂ ಕಾರ್ಗತ್ತಲು ಜನಾಂಗಗಳನ್ನು ಮುಚ್ಚಿದೆ; ನಿನ್ನ ಮೇಲಾದರೋ ಯೆಹೋವನು ಉದಯಿಸುವನು.” (ಯೆಶಾ 60:2)
ಆದ್ದರಿಂದ, ಕತ್ತಲೆಯ ಆಳ್ವಿಕೆಯು ಮುರಿಯಲ್ಪಡುವಂತೆ ಮತ್ತು ದೇವರ ಮಹಿಮೆಯು ಉದಯಿಸುವಂತೆ ನೀವು ಪ್ರಾರ್ಥಿಸುವುದು ಅತ್ಯಗತ್ಯವಾಗಿದೆ.
ಪರಿಶುದ್ಧಾತ್ಮನು ಚಲಿಸುವಾಗ, ಆತನು ಪಾಪ, ನೀತಿ ಮತ್ತು ನ್ಯಾಯತೀರ್ಪಿನ ವಿಷಯವಾಗಿ ಜನರನ್ನು ಖಂಡಿಸಿ ಅರುಹನ್ನು ಹುಟ್ಟಿಸಿದ್ದಾನೆ. ಆಗ ಪಾಪಿಗಳ ಹೃದಯಗಳು ಮುರಿಯಲ್ಪಟ್ಟು, ಅವರು ಪಶ್ಚಾತ್ತಾಪದ ಕಣ್ಣೀರಿನಿಂದ ದೇವರ ಕಡೆಗೆ ತಿರುಗುತ್ತಾರೆ. ಅವರು ತಮ್ಮ ದುಸ್ಥಿತಿಯನ್ನು ಅರಿತು, “ಅಯ್ಯೋ! ನಾನು ಪಾಪಿಯಾಗಿ ಬಾಳಿದ್ದೇನೆ. ನನ್ನ ಪಾಪಗಳಿಗೆ ನನಗೆ ಕ್ಷಮೆ ಬೇಕು. ನನಗೆ ರಕ್ಷಣೆಯ ಆನಂದ ಬೇಕು!” ಎಂದು ಕೂಗಿಕೊಳ್ಳುತ್ತಾರೆ.
ವಿದ್ಯುತ್ ಬೆಳಕಾಗಲಿ ಅಥವಾ ಸೂರ್ಯನ ಬೆಳಕಾಗಲಿ ನಿಮ್ಮ ಆತ್ಮಕ್ಕೆ ಪ್ರಕಾಶವನ್ನು ತರಲಾರವು. ಪರಿಶುದ್ಧಾತ್ಮನು ಮಾತ್ರವೇ ನಿಮ್ಮ ಹೃದಯದೊಳಗಿನ ಕಾರ್ಗತ್ತಲನ್ನು ಹೋಗಲಾಡಿಸಬಲ್ಲನು.
ಪೌಲನು ಸೌಲನೆಂದು ಕರೆಯಲ್ಪಡುತ್ತಿದ್ದಾಗ, ಆತನು ಮಹಾ ಧಾರ್ಮಿಕ ಆಸಕ್ತಿಯುಳ್ಳವನಾಗಿದ್ದನು. ಆದಾಗ್ಯೂ ಆತನೊಳಗೆ ಕತ್ತಲೆಯಿತ್ತು, ಮತ್ತು ಆ ಕತ್ತಲೆಯ ಕಾರಣದಿಂದಲೇ ಆತನು ಸಭೆಯನ್ನು ಹಾಳುಮಾಡಿದನು. ಕ್ರೈಸ್ತರನ್ನು ಹಿಂಸಿಸುವುದು, ತೊಂದರೆಪಡಿಸುವುದು ಮತ್ತು ನಾಶಮಾಡುವುದು ದೇವರಿಗೆ ಮಾಡುವ ಸೇವೆ ಎಂದು ಆತನು ನಂಬಿದ್ದನು.
ಒಂದು ದಿನ, ಆತನು ದಮಸ್ಕದ ದಾರಿಯಲ್ಲಿ ಪ್ರಯಾಣಿಸುತ್ತಿರುವಾಗ, ಪರಿಶುದ್ಧಾತ್ಮನ ಬೆಳಕು ಆತನ ಮೇಲೆ ಪ್ರಕಾಶಿಸಿತು. ಆತನ ಜೀವನದಲ್ಲಿ ಉನ್ನತವಾದ ಮಹಿಮೆಯುಳ್ಳ ರೂಪಾಂತರ ನಡೆಯಿತು! ಮೆಸ್ಸಿಯನಾದ ಯೇಸು ಕ್ರಿಸ್ತನು ಆತನ ಜೀವನದಲ್ಲಿ ಪ್ರವೇಶಿಸಿದನು. ಆತನು ತನ್ನನ್ನು ಒಬ್ಬ ಪಾಪಿ—ಅದರಲ್ಲೂ ಪಾಪಿಗಳಲ್ಲಿ ಅಗ್ರಗಣ್ಯನೆಂದು—ಅರಿತುಕೊಳ್ಳುವಂತೆ ಮಾಡಲ್ಪಟ್ಟನು. ಆತನ ಹೃದಯವನ್ನು ಮುಚ್ಚಿದ್ದ ಕತ್ತಲೆಯು ಓಡಿಸಲ್ಪಟ್ಟಿತು, ಮತ್ತು ಆತನು ಸತ್ಯವನ್ನು ಅರಿತುಕೊಂಡನು.
ನಿಜವಾದ ಬೆಳಕಾಗಿದ್ದು, ಪ್ರತಿಯೊಬ್ಬ ಮನುಷ್ಯನಿಗೂ ಬೆಳಕನ್ನು ಕೊಡುವಾತನು, ಖಂಡಿತವಾಗಿಯೂ ನಿಮ್ಮ ಆತ್ಮಕ್ಕೂ ಬೆಳಕನ್ನು ಮತ್ತು ಮಹಿಮೆಯನ್ನು ತರುತ್ತಾನೆ.
ಸಾಧು ಸುಂದರ್ ಸಿಂಗ್ ಅವರೂ ಸಹ ಒಂದು ಕಾಲದಲ್ಲಿ ಕ್ರಿಸ್ತನನ್ನು ತಿಳಿಯದೆ, ಕತ್ತಲೆಯ ಆಳ್ವಿಕೆಗೆ ಒಳಪಟ್ಟು ಜೀವಿಸುತ್ತಿದ್ದರು. ಅವರು ಯೇಸು ಕ್ರಿಸ್ತನಿಗೆ ವಿರುದ್ಧವಾಗಿ ಮಾತನಾಡಿದರು ಮತ್ತು ಸತ್ಯವೇದದ ಪುಟಗಳನ್ನು ಹರಿದು ಬೆಂಕಿಗೆ ಎಸೆದರು. ಆದರೆ ಒಂದು ದಿನ, ಪರಿಶುದ್ಧಾತ್ಮನು ಅವರ ಜೀವನದ ಮೇಲೆ ಚಲಿಸಿದನು. ಆ ದೈವಿಕ ಚಲನೆಯು ಅದ್ಭುತ ರೂಪಾಂತರವನ್ನು ತಂದಿತು. ಅವರು ಯೇಸುವಿಗಾಗಿ ಎಲ್ಲವನ್ನೂ ತೊರೆದು, ಭಾರತದಾದ್ಯಂತ ಬರಿಗಾಲಿನಲ್ಲಿ ಪ್ರಯಾಣಿಸಿ, ಕರ್ತನ ನಾಮವನ್ನು ಎತ್ತಿಹಿಡಿದರು. ಅವರು ಭಾರತದ ಅಪೊಸ್ತಲನು ಎಂದು ಪ್ರಸಿದ್ಧರಾದರು.
ಪ್ರಿಯ ದೇವರ ಮಕ್ಕಳೇ, ಕರ್ತನ ಬೆಳಕಿಗೆ ಬನ್ನಿರಿ. ಪರಿಶುದ್ಧಾತ್ಮನು ನಿಮ್ಮ ಜೀವನದಲ್ಲಿ ಕಾರ್ಯಮಾಡಲು ಅವಕಾಶ ನೀಡಿರಿ. ನೀವು ಹಾಗೆ ಮಾಡುವಾಗ, ಸರ್ವಶಕ್ತನು ಖಂಡಿತವಾಗಿಯೂ ನಿಮ್ಮಲ್ಲಿ ಮತ್ತು ನಿಮ್ಮ ಮೂಲಕ ಮಹಿಮೆಯುಳ್ಳ ಕಾರ್ಯಗಳನ್ನು ನೆರವೇರಿಸುತ್ತಾನೆ. ಕತ್ತಲೆಯಿರುವಲ್ಲಿ ಆತನು ಬೆಳಕನ್ನು ತರಬಲ್ಲನು; ಆಧ್ಯಾತ್ಮಿಕ ಮರಣವಿರುವಲ್ಲಿ ಆತನು ಜೀವವನ್ನು ತರಬಲ್ಲನು; ಮತ್ತು ಶೂನ್ಯತೆಯಿರುವಲ್ಲಿ ಆತನು ಪರಿಪೂರ್ಣತೆಯನ್ನು ತರಬಲ್ಲನು.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ:
“ಯಾರಾರು ದೇವರ ಆತ್ಮನಿಂದ ನಡಿಸಿಕೊಳ್ಳುತ್ತಾರೋ ಅವರು ದೇವರ ಮಕ್ಕಳು.” (ರೋಮಾ 8:14)