Appam, Appam - Kannada

ನವೆಂಬರ್ 28 – ದೇವಾಲಯದ ಅಂಗಳಗಳು!

“ನಿನ್ನ ಅಂಗಳದಲ್ಲಿ ವಾಸಿಸುವವರಾಗಿ ನಿನ್ನ ಸನ್ನಿಧಿಯಲ್ಲಿ ಸೇವೆ ಮಾಡುವದಕ್ಕೋಸ್ಕರ ಯಾರನ್ನು ಆರಿಸಿಕೊಳ್ಳುತ್ತಿಯೋ ಅವರೇ ಧನ್ಯರು” ಕೀರ್ತನೆ 65:4

ಒಂದು ದೊಡ್ಡ ಸಭೆಯ ಗಾಯಕ ವೃಂದದಲ್ಲಿ ಸುಮಾರು ಐವತ್ತರಿಂದ ಅರವತ್ತು ಗಾಯಕರು ಇದ್ದರು. ಅವರು ಸುಂದರವಾದ ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದರು, ಮತ್ತು ಆ ಗಾಯಕರಲ್ಲಿ ಒಬ್ಬ ವೃದ್ಧ ವ್ಯಕ್ತಿಯೂ ಇದ್ದರು. ಅವರು ತಮ್ಮ ಬಾಲ್ಯದಲ್ಲಿಯೇ ರಕ್ಷಿಸಲ್ಪಟ್ಟು, ಅಭಿಷೇಕವನ್ನು ಪಡೆದುಕೊಂಡು, ಕರ್ತನನ್ನು ಪ್ರೀತಿಸುತ್ತಾ ಆರಾಧಿಸುತ್ತಾ ಬಂದಿದ್ದರು. ಆದರೆ ಅವರು ವೃದ್ಧರಾದಂತೆ, ಅವರ ಧ್ವನಿಯು ಕ್ಷೀಣಿಸಿ ಕರ್ಕಶವಾಯಿತು, ಮತ್ತು ಇನ್ನು ಮುಂದೆ ಅವರಿಂದ ಮಧುರವಾಗಿ ಹಾಡಲು ಆಗಲಿಲ್ಲ. ಆದ್ದರಿಂದ ಗಾಯಕ ವೃಂದದ ನಾಯಕನು ಅವರು ಸರಿಯಾಗಿ ಹಾಡುತ್ತಿಲ್ಲವೆಂದು ಹೇಳಿ ಅವರನ್ನು ಮನೆಗೆ ಕಳುಹಿಸಿಬಿಟ್ಟನು.

ಮುಂದಿನ ವಾರ, ಗಾಯಕ ವೃಂದವು ಹಾಡುವುದನ್ನು ಪ್ರಾರಂಭಿಸುವ ಮುಂಚೆ, ಒಬ್ಬ ದೂತನು ಇಳಿದುಬಂದು ಗಾಯಕ ವೃಂದದ ನಾಯಕನೊಂದಿಗೆ ಮಾತನಾಡಿದನು. “ಈ ಗಾಯಕ ವೃಂದದಲ್ಲಿರುವ ಎಲ್ಲರಲ್ಲಿ, ಕೇವಲ ಒಬ್ಬ ವ್ಯಕ್ತಿಯ ಮಧುರವಾದ ಧ್ವನಿಯು ಮಾತ್ರ ಪರಲೋಕವನ್ನು ಮುಟ್ಟಿದೆ. ಕಳೆದ ಮೂವತ್ತು ವರ್ಷಗಳಿಂದ, ಕರ್ತನು ಆ ಧ್ವನಿಯಲ್ಲಿ ಆನಂದಿಸುತ್ತಿದ್ದಾನೆ. ನೀನು ಅವನನ್ನು ಯಾಕೆ ಮನೆಗೆ ಕಳುಹಿಸಿದೆ? ಕರ್ತನು ಆತನ ಧ್ವನಿಯನ್ನು ಕೇಳಲು ಬಹಳವಾಗಿ ಆತುರದಿಂದಿದ್ದಾನೆ.”

ಗಾಯಕ ವೃಂದದ ನಾಯಕನು ಹೀಗೆ ಉತ್ತರಿಸಿದನು, “ಆದರೆ ಗಾಯಕ ವೃಂದದಲ್ಲಿ ಇನ್ನು ಐವತ್ತು ಜನ ಗಾಯಕರಿದ್ದಾರೆ. ಅವರು ಮಧುರವಾಗಿ, ಸುಂದರವಾದ ರಾಗಗಳೊಂದಿಗೆ ಮತ್ತು ಅತ್ಯುತ್ತಮ ಧ್ವನಿಯೊಂದಿಗೆ ಹಾಡುತ್ತಾರೆ.”

ದೂತನು ಉತ್ತರಿಸಿದನು, “ಅವರಲ್ಲಿ ಯಾರೂ ರಕ್ಷಿಸಲ್ಪಟ್ಟಿಲ್ಲದಿರುವುದರಿಂದ ಅವರ ಧ್ವನಿಗಳಲ್ಲಿ ಯಾವುದೂ ಪರಲೋಕವನ್ನು ಮುಟ್ಟಲಿಲ್ಲ. ಅವರು ಆತ್ಮದಲ್ಲೂ ಸತ್ಯದಲ್ಲೂ ಕರ್ತನನ್ನು ಆರಾಧಿಸಲಿಲ್ಲ. ಅವರ ಧ್ವನಿಗಳು ಎಷ್ಟೇ ಮಧುರವಾಗಿದ್ದರೂ, ಅವರ ಹಾಡುಗಾರಿಕೆಯು ಸಭೆಯ ಮೇಲ್ಛಾವಣಿಯನ್ನು ಮೀರಿ ಮೇಲಕ್ಕೆ ಹೋಗುವುದಿಲ್ಲ. ಹೃದಯದ ಆಳದಿಂದ ಪೂರ್ಣ ಹೃದಯದಿಂದ ಬರುವ ಹಾಡುಗಳನ್ನು ಕರ್ತನು ಆಲಿಸುತ್ತಾನೆ. ತನ್ನ ಜನರ ಸ್ತುತಿಗಳ ನಡುವೆ ವಾಸಿಸುವವನು ಆತನೇ.”

ಪ್ರಿಯ ದೇವರ ಮಕ್ಕಳೇ, ಕರ್ತನು ವಾಸಿಸುವ ಆಲಯವು ನಾವೇ ಆಗಿದ್ದೇವೆ. ಆತನ ಆಲಯದ ಸಮೃದ್ಧಿಯಿಂದ ತೃಪ್ತರಾಗಲು ನೀವು ಬಯಸಿದರೆ, ಆತನ ಅಂಗಳಗಳಿಗೆ ಬಂದು ಆತನನ್ನು ಆರಾಧಿಸಿರಿ. ಆತನು ಅಲ್ಲಿ ನಿಮ್ಮನ್ನು ಸಂಧಿಸಿ ನಿಮ್ಮ ಕೊರತೆಗಳನ್ನು ಪೂರೈಸುವನು.

ನಿಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸುವವನನ್ನು ಭೇಟಿಯಾಗಲು ನೀವು ದೇವಾಲಯಕ್ಕೆ ಬರಬಾರದೇ? ಸಹೋದರರು ಒಂದಾಗಿರುವದು ಐಕ್ಯತೆಯಿಂದ ವಾಸಿಸುವುದು ಎಷ್ಟು ಒಳ್ಳೆಯದು ಮತ್ತು ಮನೋಹರವಾಗಿದೆ! ಅಲ್ಲಿ ಕರ್ತನು ಆಶೀರ್ವಾದವನ್ನೂ ನಿತ್ಯ ಜೀವವನ್ನೂ ಆಜ್ಞಾಪಿಸುತ್ತಾನೆ (ಕೀರ್ತನೆ 133:1, 3).

ಅರಸನಾದ ದಾವೀದನು ತನ್ನನ್ನು ತಾನೇ ತಗ್ಗಿಸಿಕೊಂಡು, ತನಗಿರುವ ಒಂದೇ ಒಂದು ಆಸೆಯೇನೆಂದರೆ – ತನ್ನ ಜೀವಮಾನದಲ್ಲೆಲ್ಲಾ ಯೆಹೋವನ ಮಂದಿರದಲ್ಲಿ ಧ್ಯಾನ ಮಾಡುವದಕ್ಕೂ ನನಗೆ ಅಪ್ಪಣೆಯಾಗಬೇಕೆಂಬ ಒಂದೇ ವರವನ್ನು ಯೆಹೋವನಿಂದ ಕೇಳಿಕೊಂಡು ಅದನ್ನೇ ಎದುರುನೋಡುತ್ತಿರುವೆನು. ಎಂಬದು (ಕೀರ್ತನೆ 27:4).

ಪ್ರೀತಿಯ ದೇವರ ಮಕ್ಕಳೇ, ಕರ್ತನ ಮನೆಯ ಅಂಗಳಗಳನ್ನು ಆಸಕ್ತಿಯಿಂದ ಹುಡುಕಿದರೆ ನೀವು ಆಶೀರ್ವದಿಸಲ್ಪಡುವಿರಿ.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ನಿನ್ನ ಆಲಯದ ಅಂಗಳಗಳಲ್ಲಿ ಕಳೆದ ಒಂದು ದಿನವು ಬೇರೆ ಸಹಸ್ರ ದಿನಗಳಿಗಿಂತ ಉತ್ತಮವಾಗಿದೆ. ದುಷ್ಟರ ಗುಡಾರಗಳಲ್ಲಿ ವಾಸಿಸುವದಕ್ಕಿಂತ ನನ್ನ ದೇವರ ಆಲಯದ ಬಾಗಿಲನ್ನು ಕಾಯ್ದುಕೊಂಡಿರುವದೇ ಲೇಸು” (ಕೀರ್ತನೆ 84:10).

Leave A Comment

Your Comment
All comments are held for moderation.