Appam, Appam - Kannada

ನವೆಂಬರ್ 20 – ಜ್ಞಾನೋಕ್ತಿಗಳು!

“ಇಸ್ರಾಯೇಲ್ಯರ ಅರಸನಾದ ದಾವೀದನ ಮಗನಾದ ಸೊಲೊಮೋನನ ಜ್ಞಾನೋಕ್ತಿಗಳು” ಜ್ಞಾನೋಕ್ತಿ 1:1

ಸತ್ಯವೇದದಲ್ಲಿ ಜ್ಞಾನ, ನೀತಿ, ಬೋಧನೆ ಮತ್ತು ಎಚ್ಚರಿಕೆಯ ನುಡಿಗಳಿವೆ. ಜ್ಞಾನೋಕ್ತಿಗಳ ಪುಸ್ತಕದಲ್ಲಿ ಮೂವತ್ತೊಂದು ಅಧ್ಯಾಯಗಳಿವೆ. ಜನವರಿ, ಮಾರ್ಚ್, ಮೇ, ಜುಲೈ, ಆಗಸ್ಟ್, ಅಕ್ಟೋಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ತಲಾ ಮೂವತ್ತೊಂದು ದಿನಗಳಿವೆ.

ಪ್ರತಿದಿನ ಒಂದು ಅಧ್ಯಾಯವನ್ನು ಓದುವುದರ ಮೂಲಕ, ಈ ಪ್ರತಿಯೊಂದು ತಿಂಗಳ ಅಂತ್ಯದ ವೇಳೆಗೆ ನೀವು ಎಲ್ಲಾ ಮೂವತ್ತೊಂದು ಅಧ್ಯಾಯಗಳನ್ನು ಮುಗಿಸಬಹುದು. ಕೇವಲ ಮೂವತ್ತು ಅಥವಾ ಇಪ್ಪತ್ತೆಂಟು ದಿನಗಳಿರುವ ತಿಂಗಳುಗಳಲ್ಲಿ, ತಿಂಗಳ ಕೊನೆಯ ದಿನಗಳಲ್ಲಿ ಉಳಿದ ಅಧ್ಯಾಯಗಳನ್ನು ಓದುವುದು ಪ್ರಯೋಜನಕಾರಿಯಾಗಿದೆ.

ಅನೇಕ ಸಭೆಗಳಲ್ಲಿ, ಸಭಾಪಾಲಕರು ತಮ್ಮ ಸಭೆಯವರಿಗೆ ಪ್ರತಿದಿನ ಜ್ಞಾನೋಕ್ತಿಗಳ ಪುಸಕದ ಕನಿಷ್ಠ ಒಂದು ಅಧ್ಯಾಯವಾದರೂ ಓದುವಂತೆ ಪ್ರೋತ್ಸಾಹಿಸುತ್ತಾರೆ. “ಇವುಗಳಿಂದ ಜನರು ಜ್ಞಾನವನ್ನೂ ಶಿಕ್ಷೆಯನ್ನೂ ಪಡೆದು ಬುದ್ಧಿವಾದಗಳನ್ನು ಗ್ರಹಿಸಿ ವಿವೇಕ ಮಾರ್ಗದಲ್ಲಿಅಂದರೆ ನೀತಿನ್ಯಾಯಧರ್ಮಗಳಲ್ಲಿ ಶಿಕ್ಷಿತರಾಗುವರು”. (ಜ್ಞಾನೋಕ್ತಿ 1:2–6).

ಜ್ಞಾನೋಕ್ತಿಗಳ ಪುಸ್ತಕದಲ್ಲಿರುವ ಪ್ರಮುಖ ಪದವೇ “ಜ್ಞಾನ”. ಫಲಭರಿತವಾದ ಜೀವನವನ್ನು ನಡೆಸಲು ದೇವರು ನಮಗೆ ಕೊಡುವ ಆಲೋಚನೆಯೇ ಜ್ಞಾನವಾಗಿದೆ. ಪಾಪದಿಂದಲೂ ದುಷ್ಟತನದಿಂದಲೂ ಅಧರ್ಮದಿಂದಲೂ ತುಂಬಿರುವ ಈ ಲೋಕದಲ್ಲಿ, ನಾವು ಪರಿಶುದ್ಧ ಜೀವನವನ್ನು ನಡೆಸಬೇಕಾದರೆ ಜ್ಞಾನವು ಅತ್ಯಗತ್ಯವಾಗಿದೆ

.

ಜ್ಞಾನೋಕ್ತಿಗಳ ಪುಸ್ತಕವು ದೇವರೊಂದಿಗೆ ನಮಗಿರುವ ಸಂಬಂಧದ ಬಗ್ಗೆಯೂ ಇತರ ಜನರೊಂದಿಗೆ ನಮಗಿರುವ ಸಂಬಂಧಗಳ ಬಗ್ಗೆಯೂ ನಮಗೆ ಬೋಧಿಸುತ್ತದೆ. ಇದು ಪೋಷಕರಿಗಾಗಿ ಇರುವ ಸಲಹೆಗಳನ್ನೂ ಒಳಗೊಂಡಿದೆ.

ಸೊಲೊಮೋನನು ಜ್ಞಾನೋಕ್ತಿಗಳ ಪ್ರತಿಯೊಂದು ಭಾಗವನ್ನೂ ಬರೆಯಲಿಲ್ಲ. ಜ್ಞಾನೋಕ್ತಿ 30:1 ರಲ್ಲಿ, ಇಥಿಯೇಲ ಮತ್ತು ಉಕ್ಕಾಲನು ಎಂಬುವವರಿಗೆ ಹೇಳಲಾದ ನುಡಿಗಳಾಗಿ ಯಾಕೆ ಎಂಬವನ ಮಗನಾದ ಆಗೂರನು ಬರೆದಿದ್ದಾರೆ. ಅದೇ ರೀತಿ, ಜ್ಞಾನೋಕ್ತಿಗಳ 31 ನೇ ಅಧ್ಯಾಯವು ಅರಸನಾದ ಲೆಮೂವೇಲನಿಗೆ ಸಂಬಂಧಿಸಿದ ಮಾತುಗಳನ್ನೂ, ಅವನ ತಾಯಿಯು ಅವನಿಗೆ ಕಲಿಸಿದ ಬೋಧನೆಯನ್ನೂ ಒಳಗೊಂಡಿದೆ.

ಸತ್ಯವೇದದ ಯಾವ ಪ್ರವಾದನೆಯೂ ಯಾವ ಮನುಷ್ಯನ ಸ್ವಂತ ಅರ್ಥೈಸಿಕೊಳ್ಳುವಿಕೆಯಿಂದಾಗಲಿ ಅಥವಾ ಇಚ್ಛೆಯಿಂದಾಗಲಿ ಬಂದದ್ದಲ್ಲ ಎಂದು ಅಪೊಸ್ತಲನಾದ ಪೇತ್ರನು ಬೋಧಿಸುತ್ತಾನೆ. ಬದಲಾಗಿ, ದೇವರ ಪರಿಶುದ್ಧ ಮನುಷ್ಯರು ಪವಿತ್ರಾತ್ಮನಿಂದ ಪ್ರೇರೇಪಿಸಲ್ಪಟ್ಟವರಾಗಿ ಮಾತನಾಡಿದರು (2 ಪೇತ್ರ 1:20–21).

ಪ್ರಿಯ ದೇವರ ಮಕ್ಕಳೇ, ಜ್ಞಾನೋಕ್ತಿಗಳ ಪುಸ್ತಕವನ್ನು ಓದಿರಿ, ಕರ್ತನು ನಿಮಗೆ ಕೃಪೆಯಿಂದ ನೀಡಿರುವ ಮಾತುಗಳೆಂದು ಸ್ವೀಕರಿಸಿ, ಅದರ ಜ್ಞಾನದ ಸಂಪೂರ್ಣ ಪ್ರಯೋಜನವನ್ನು ಅನುಭವಿಸಿರಿ.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ. ಅದರಿಂದ ಮನುಷ್ಯನು ಪ್ರವೀಣನಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧನಾಗುವನ17).

Leave A Comment

Your Comment
All comments are held for moderation.