Appam, Appam - Kannada

ಅಕ್ಟೋಬರ್ 04 – ಹುಡುಕುವ ಸಮಯ!

“ನೀತಿಯ ಬೀಜವನ್ನು ಬಿತ್ತಿರಿ, ಪ್ರೀತಿಯ ಫಲವನ್ನು ಕೊಯ್ಯಿರಿ, ಗೆಯ್ಯದ ನಿಮ್ಮ ಭೂಮಿಯನ್ನು ಗೆಯ್ಯಿರಿ; ಯೆಹೋವನು ಬಂದು ನಮ್ಮ ಮೇಲೆ ನೀತಿಯನ್ನು ವರ್ಷಿಸಲೆಂದು ಆತನನ್ನು ಶರಣುಹೋಗುವ ಸಮಯವು ಒದಗಿದೆ.” (ಹೋಶೇ 10:12)

ಮೇಲಿನ ವಚನದಲ್ಲಿ, ಪ್ರವಾದಿಯಾದ ಹೋಶೆಯನು ಇದು ಕೇವಲ ಹಗಲಿನ ಸಮಯವಲ್ಲ, ಕರ್ತನನ್ನು ಹುಡುಕುವ ಸಮಯ ಎಂದು ನಮಗೆ ನೆನಪಿಸುತ್ತಾನೆ.

ನಿಮ್ಮ ಪೂರ್ಣ ಹೃದಯದಿಂದ ಮತ್ತು ನಿಮ್ಮ ಪೂರ್ಣ ಪ್ರಾಣದಿಂದ ಕರ್ತನನ್ನು ಹುಡುಕಿ. ಉಪವಾಸ ಮತ್ತು ಪ್ರಾರ್ಥನೆಯಿಂದ ಆತನನ್ನು ಹುಡುಕಿರಿ. ಸತ್ಯವೇದವು ಹೇಳುತ್ತದೆ: “ಹುಡುಕಿರಿ, ನಿಮಗೆ ಸಿಕ್ಕುವದು.” ಇತರ ಭಾಷಾಂತರಗಳು “ಹುಡುಕುತ್ತಲೇ ಇರಿ, ನಿಮಗೆ ಸಿಕ್ಕುವದು” ಎಂಬ ಆಲೋಚನೆಯನ್ನು ತಿಳಿಸುತ್ತವೆ. ಆದ್ದರಿಂದ ನಾವು ನಿರಂತರವಾಗಿಯೂ ಗಂಭೀರವಾಗಿಯೂ ಕರ್ತನನ್ನು ಹುಡುಕಲು ಕರೆಯಲ್ಪಟ್ಟಿದ್ದೇವೆ.

ಶುಲಮ್ಯಳಾದ ಸ್ತ್ರೀಯು ಹೇಳುತ್ತಾಳೆ: “ರಾತ್ರಿ ರಾತ್ರಿಯಲ್ಲಿಯೂ ಹಾಸಿಗೆಯ ಮೇಲೆ ನನ್ನ ಪ್ರಾಣಪ್ರಿಯನನ್ನು ಹುಡುಕಿದೆನು; ಎಚ್ಟು ಹುಡುಕಿದರೂ ಸಿಕ್ಕಲಿಲ್ಲ. ನಾನು ಎದ್ದು ಊರಲ್ಲಿ ತಿರುಗುವೆನು, ಬೀದಿಗಳಲ್ಲಿಯೂ ಚೌಕಗಳಲ್ಲಿಯೂ ನನ್ನ ಪ್ರಾಣಪ್ರಿಯನನ್ನು ಹುಡುಕುವೆನು ಎಂದುಕೊಂಡೆನು; ಸಿಕ್ಕಲಿಲ್ಲ. ಅವರನ್ನು ಬಿಟ್ಟ ತುಸು ಹೊತ್ತಿನೊಳಗೆ ನನ್ನ ಪ್ರಾಣಪ್ರಿಯನನ್ನು ಕಂಡುಕೊಂಡು ತಾಯಿಯ ಮನೆಗೆ ನನ್ನನ್ನು ಹೆತ್ತವಳ ಕೋಣೆಗೆ, ಸೇರುವ ತನಕ ಬಿಡದೆ ಹಿಡಿದುಕೊಂಡೇ ಹೋದೆನು.” (ಪರಮ 3:1-2,4)

ಪ್ರತಿ ದಿನ, ನಿಮ್ಮ ಪ್ರಾರ್ಥನೆಯ ಸಮಯದಲ್ಲಿ, ಕರ್ತನ ಮುಖವನ್ನು ಹುಡುಕಿ. ಆತನು ನಿಮ್ಮೊಂದಿಗೆ ಏನು ಮಾತನಾಡಲು ಬಯಸುತ್ತಾನೆ ಎಂಬುದನ್ನು ತಿಳಿಯಲು ಕಾತುರರಾಗಿರಿ. ಆತನ ಧ್ವನಿಯನ್ನು ಕೇಳಲು ಮತ್ತು ನಿಮ್ಮ ಜೀವನಕ್ಕಾಗಿ ಆತನ ಚಿತ್ತವನ್ನು ಅರ್ಥಮಾಡಿಕೊಳ್ಳಲು ಹಂಬಲಿಸಿರಿ. ಸತ್ಯವೇದ ಹೇಳುತ್ತದೆ: “ನೀವು ಆತನನ್ನು ಹುಡುಕಿದರೆ, ಆತನು ನಿಮಗೆ ಸಿಕ್ಕುವನು.” (2 ಪೂರ್ವ 15:2)

ಒಂದು ಕಡೆ, ನಾವು ಆತನನ್ನು ಹುಡುಕುತ್ತೇವೆ. ಮತ್ತೊಂದು ಕಡೆ, ಆತನು ನಮ್ಮನ್ನು ಹುಡುಕುತ್ತಿದ್ದಾನೆ. ನಮ್ಮ ಮೇಲಿರುವ ಆತನ ಶ್ರೇಷ್ಟವಾದ ಪ್ರೀತಿ ಮತ್ತು ವಾತ್ಸಲ್ಯದಿಂದಾಗಿ, ಆತನು ಪರಲೋಕವನ್ನು ಬಿಟ್ಟು ನಮ್ಮನ್ನು ಹುಡುಕಲು ಭೂಮಿಗೆ ಬಂದನು. ಆತನು ನಮ್ಮ ಹುಡುಕಾಟದಲ್ಲಿ ಒರಟಾದ ಮತ್ತು ಮುಳ್ಳಿನ ಹಾದಿಗಳಲ್ಲಿ ನಡೆದನು. ಕಳೆದುಹೋದವರ ಮೇಲಿನ ಆತನ ಪ್ರೀತಿಯ ಹುಡುಕಾಟದಿಂದಾಗಿಯೇ ಯೇಸು ನಮಗೆ ಲೂಕ 15 ರಲ್ಲಿ ದಾಖಲಾಗಿರುವ ಸುಂದರವಾದ ಸತ್ಯಗಳನ್ನು ನೀಡಿದನು.

ಅಲ್ಲಿ ನಾವು ಕಳೆದುಹೋದ ಕುರಿಯನ್ನು ಸಿಗುವವರೆಗೆ ಹುಡುಕುವ ಒಳ್ಳೆಯ ಕುರುಬನ ಸಾಮ್ಯವನ್ನು ಓದುತ್ತೇವೆ; ಕಳೆದುಹೋದ ಬೆಳ್ಳಿಯ ನಾಣ್ಯವನ್ನು ಸಿಗುವವರೆಗೆ ಶ್ರದ್ಧೆಯಿಂದ ಹುಡುಕುವ ಸ್ತ್ರೀಯನ್ನು; ಮತ್ತು ತಪ್ಪಿಹೋದ ಮಗನು ಮನೆಗೆ ಮರಳಿ ಬರಲು ಕಾತರದಿಂದ ಕಾಯುವ ತಂದೆಯನ್ನು ನೋಡುತ್ತೇವೆ.

ಕರ್ತನು ನಿಮ್ಮನ್ನು ಹುಡುಕುತ್ತಿದ್ದಾನೆ—ಆದ್ದರಿಂದ ನೀವೂ ಆತನನ್ನು ಹುಡುಕಬೇಕು. ಕರ್ತನು ನಿಮ್ಮನ್ನು ಪ್ರೀತಿಸುತ್ತಾನೆ—ಆದ್ದರಿಂದ ನೀವೂ ಆತನನ್ನು ಪ್ರೀತಿಸಬೇಕು. ಇದು ಕರ್ತನನ್ನು ನಿಷ್ಕಂಕವಾಗಿ ಪೂರ್ಣಹೃದಯದಿಂದಲೂ ಹುಡುಕುವ ಸಮಯವಾಗಿದೆ.

ಇರುವೆಗಳನ್ನು ನೋಡಿರಿ. ಅವು ತಮ್ಮ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳುತ್ತವೆ. ಆಹಾರವನ್ನು ಸಂಗ್ರಹಿಸುವ ಕಾಲ ಬಂದಾಗ, ಮಳೆಯ ಕಾಲ ಬರುವ ಮುಂಚೆಯೇ ಅವು ಶ್ರದ್ಧೆಯಿಂದ ಆಹಾರವನ್ನು ಹುಡುಕಿ ಸಂಗ್ರಹಿಸಿಡುತ್ತವೆ. ಅವು ಮುಂಚಿತವಾಗಿ ಸಿದ್ಧತೆ ಮಾಡಿಕೊಳ್ಳುವುದರಿಂದ, ಮಳೆಯ ಕಾಲವನ್ನು ಯಾವುದೇ ಆತಂಕವಿಲ್ಲದೆ ಸಮಾಧಾನದಿಂದ ಎದುರಿಸಲು ಸಮರ್ಥವಾಗಿವೆ.

ಅದೇ ರೀತಿಯಲ್ಲಿ, ಆತ್ಮೀಕ ಕ್ಷಾಮದ ಕಾಲ ಬರುವ ಮುಂಚೆ—ದೇವರ ವಾಕ್ಯವು ಸುಲಭವಾಗಿ ಸಿಗದೇ ಇರುವ ಕಾಲ ಬರುವ ಮುಂಚೆ—ಆತ್ಮವೂ ಜೀವವೂ ಆಗಿರುವ ದೇವರ ವಾಕ್ಯವನ್ನು ಓದಿ ಧ್ಯಾನಿಸಿ. ಒಳ್ಳೆಯ ಆಧ್ಯಾತ್ಮಿಕ ಪುಸ್ತಕಗಳನ್ನು ಓದಿ ಅವು ನೀಡುವ ಪ್ರಯೋಜನವನ್ನು ಪಡೆಯಿರಿ. ಹೌದು, ಇದು ಕರ್ತನನ್ನು ಹುಡುಕುವ ಮತ್ತು ಆತನ ವಾಕ್ಯವನ್ನು ಹುಡುಕುವ ಸಮಯವಾಗಿದೆ.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಸುಗ್ಗಿಯಲ್ಲಿ ಕೂಡಿಸುವವನು ಬುದ್ಧಿವಂತನು; ಕೊಯ್ಲಿನಲ್ಲಿ ತೂಕಡಿಸುವವನು ನಾಚಿಕೆಗೆಟ್ಟವನು.” (ಜ್ಞಾನೋ 10:5)

Leave A Comment

Your Comment
All comments are held for moderation.